ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home

ಆದತ್ತು

ಆದತ್ತನ್ನು ಮಾರುತ್ತಾರೆ ಸಮಯದ ಕ್ರಯಕ್ಕೆ ನಾವು ಆ ಸಮಯವನ್ನು ಕೊಳ್ಳುತ್ತೇವೆ ನಿಗದಿತ ದರಕ್ಕೆ.! ಐದು ಸಾಲುಗಳಲ್ಲಿ ಮುಗಿದುಹೋಯಿತು ಅಂದುಕೊಳ್ಳಬೇಡಿ,ಐದು ಸಾಲುಗಳ ಹಿಂದೆ ಇಡೀ ವ್ಯಾಪಾರವಿದೆ,ಮೊದಲು ಎಲ್ಲವೂ ಉಚಿತ,ಬಾಗಿಲು ತೆರೆದಿದೆ,ಕೈ ಹಿಡಿದು ಒಳಗೆ ಕರೆಯುತ್ತಾರೆ,ದುಡ್ಡು ಕೇಳುವುದಿಲ್ಲ,ಬರೀ ಬೆರಳನ್ನು ಕೇಳುತ್ತಾರೆ,ಬೆರಳು ಕಲಿಯುತ್ತದೆ,ಬೆರಳು ಕಲಿತ ಮೇಲೆ ಕೈ ಕಲಿಯುತ್ತದೆ,ಕೈ ಕಲಿತ ಮೇಲೆ ದಿನ ಕಲಿಯುತ್ತದೆ,ಅಷ್ಟರಲ್ಲಿ ಅಭ್ಯಾಸವಾಗಿ ಹೋಗಿರುತ್ತದೆ,ಕೈ ತಾನಾಗಿಯೇ ಹುಡುಕುತ್ತದೆ,ಕಣ್ಣು ತಾನಾಗಿಯೇ ನೋಡುತ್ತದೆ,ಮನಸ್ಸು ಕೇಳುವುದಕ್ಕೂ ಮುಂಚೆ ಬೆರಳು ಒತ್ತಿಬಿಟ್ಟಿರುತ್ತದೆ. ಉಚಿತ ಅಂದುಕೊಂಡಿದ್ದೆ,ಅಸಲಿಗೆ ಉಚಿತವಾಗಿರಲಿಲ್ಲ,ಬೆಲೆ ಇತ್ತು,ಬೆಲೆ ಕಾಣಿಸುತ್ತಿರಲಿಲ್ಲ ಅಷ್ಟೇ,ಬೆಲೆ ದುಡ್ಡಲ್ಲ,ಬೆಲೆ ಸಮಯ,ಗಂಟೆಗಳು ಹೋದವು,ರಾತ್ರಿಗಳು ಹೋದವು,ರಾತ್ರಿ ಹಾಸಿಗೆಯಲ್ಲಿ ಮುಖದ ಮೇಲೆ ಬೆಳಕು ಬಿದ್ದು ಕಣ್ಣು ಮುಚ್ಚುವುದಿಲ್ಲ,ಬೆಳಿಗ್ಗೆ ಎದ್ದಾಗ ಮೊದಲು ಕೈ ಹುಡುಕುವುದು ಅದನ್ನೇ,ಹೋದದ್ದು ಹೋದದ್ದೇ,ಯಾರೂ ಲೆಕ್ಕ ಕೇಳಲಿಲ್ಲ,ನಾನೂ ಕೇಳಲಿಲ್ಲ,ಕೇಳಿದ್ದರೆ ಏನು ಉತ್ತರ ಸಿಗುತ್ತಿತ್ತೋ ಗೊತ್ತಿಲ್ಲ,ಇರಲಿಬಿಡಿ. ಆಮೇಲೆ ಒಂದು ದಿನ ಬಾಗಿಲು ಸ್ವಲ್ಪ ಮುಚ್ಚುತ್ತದೆ,ಉಚಿತವಾಗಿದ್ದದ್ದು ಅರ್ಧ ಉಚಿತವಾಗುತ್ತದೆ,ಅರ್ಧ ಉಚಿತವಾಗಿದ್ದದ್ದು ದರವಾಗುತ್ತದೆ,ದರವನ್ನು ನಿಗದಿ ಮಾಡಿದ್ದು ನಾವಲ್ಲ,ಅವರು,ನಿಗದಿತ ದರಕ್ಕೆ ಕೊಳ್ಳಬೇಕೆಂದು ಹೇಳುತ್ತಾರೆ,ಕೊಳ್ಳದಿದ್ದರೆ ಅಭ್ಯಾಸ ಏನು ಮಾಡುವುದು,ಅಭ್ಯಾಸ ಕೈ ಬಿಡುವುದಿಲ್ಲ,ಕೈ ಬಿಡಬೇಕೆಂದರೆ ಕೈಯನ್ನೇ ಕಟ್ಟಬೇಕು,ಕಟ್ಟಲು ಆಗುವುದಿಲ್ಲ,ಆಗ ಕೊಳ್ಳುತ್ತೇವೆ,ಕೊಳ್ಳಲೇಬೇಕಾಗುತ್ತದೆ,ಏಕೆಂದರೆ ಅಷ್ಟು ಹೊತ್ತಿಗೆ ಅದು ನಮ್ಮದೇ ಆಗಿ ಹೋಗಿರುತ್ತದೆ,ನಮ್ಮದೇ ಆಗಿದ್ದನ್ನು ಬಿಡುವುದು ಕಷ್ಟ,ಬಿಡುವುದು ಕಷ್ಟವೆಂದು ಅವರಿಗೆ ಗೊತ್ತು,ಗೊತ್ತಿದ್ದೇ ದರ ನಿಗದಿ ಮಾಡಿದ್ದಾರೆ,ಬಹುಶಃ ಅದೇ ವ್ಯಾಪಾರ,ಮೊದಲು ಅಭ್ಯಾಸವನ್ನು ಉಚಿತವಾಗಿ ಕೊಡುವುದು,ಆಮೇಲೆ ಅದೇ ಅಭ್ಯಾಸವನ್ನು ನಮಗೇ ಮಾರುವುದು,ನಾವು ಕೊಳ್ಳುವುದು,ಕೊಳ್ಳುತ್ತಲೇ ಇರುವುದು. ಹಾಗಾದರೆ ದರ ಕಟ್ಟದಿದ್ದರೆ ಏನಾಗುತ್ತದೆ,ಬಾಗಿಲು ಮುಚ್ಚುತ್ತದೆ,ಮುಚ್ಚಿದ ಬಾಗಿಲಿನ ಹೊರಗೆ ನಿಂತು ಕೈ ಹುಡುಕುತ್ತದೆ,ಕೈ ಹುಡುಕಿದರೆ ಏನು ಸಿಗುತ್ತದೆ,ಏನೂ ಸಿಗುವುದಿಲ್ಲ,ಸಿಗದಿದ್ದರೆ ಕೈ ಮತ್ತೆ ಹುಡುಕುತ್ತದೆ,ಹುಡುಕುವುದೇ ಅಭ್ಯಾಸ,ಅಭ್ಯಾಸಕ್ಕೆ ಬಾಗಿಲು ಬೇಕಿಲ್ಲ,ಅಭ್ಯಾಸಕ್ಕೆ ಕೈ ಸಾಕು,ಕೈಗೆ ಬಾಗಿಲು ಬೇಕು,ಬಾಗಿಲಿಗೆ ದರ ಬೇಕು,ದರಕ್ಕೆ ದುಡ್ಡು ಬೇಕು,ದುಡ್ಡು ಕೊಟ್ಟರೆ ಬಾಗಿಲು ತೆರೆಯುತ್ತದೆ,ತೆರೆದರೆ ಕೈ ಒಳಗೆ ಹೋಗುತ್ತದೆ,ಒಳಗೆ ಹೋದರೆ ಮತ್ತೆ ಅದೇ,ಮತ್ತೆ ಗಂಟೆಗಳು,ಮತ್ತೆ ರಾತ್ರಿಗಳು,ಮತ್ತೆ ಬೆಳಕು,ಬಹುಶಃ ಇದೇ ಚಕ್ರ,ಚಕ್ರ ತಿರುಗುತ್ತದೆ,ತಿರುಗುವಾಗ ದರವೂ ತಿರುಗುತ್ತದೆ,ದರ ತಿರುಗಿದರೆ ಮೇಲೇರುತ್ತದೆ,ಮೇಲೇರಿದರೆ ಕಟ್ಟಬೇಕು,ಕಟ್ಟದಿದ್ದರೆ ಬಾಗಿಲು ಮುಚ್ಚುತ್ತದೆ,ಮುಚ್ಚಿದರೆ ಮತ್ತೆ ಕೈ ಹುಡುಕುತ್ತದೆ,ಇರಲಿಬಿಡಿ,ಚಕ್ರ ನಿಲ್ಲುವುದಿಲ್ಲ,ನಿಲ್ಲಬೇಕೆಂದರೂ ನಿಲ್ಲುವುದಿಲ್ಲ. ಮುಂದೇನಾಗುತ್ತದೆ ಅಂತ ಕೇಳಿದರೆ ಗೊತ್ತಿಲ್ಲ,ಕೈ ಮಾತ್ರ ಹುಡುಕುತ್ತಲೇ ಇರುತ್ತದೆ,ಬೆರಳು ಮಾತ್ರ ಒತ್ತುತ್ತಲೇ ಇರುತ್ತದೆ,ದರ ಮಾತ್ರ ಏರುತ್ತಲೇ ಇರುತ್ತದೆ,ನೋಡೋಣ..!
-ಅವಿಜ್ಞಾನಿ

ಇನ್ನೂ ಓದಿ: ಲೇಖನಗಳು

🤖 ಅವಿಜ್ಞಾನಿ AI