ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ

ನಿಮ್ಮ ಕುತೂಹಲಕ್ಕೆ About Me

ಅವಿಜ್ಞಾನಿ

ಅವಿಜ್ಞಾನಿ ಕನ್ನಡದ ಯುವ ಕವಿ. ಇವರ ಪ್ರಥಮ ಕವನ ಸಂಕಲನ ‘ಅನಾಮಧೇಯ ಗೀರುಗಳು’ ಅಪ್ರಕಟಿತವಾಗಿದ್ದಾಗಲೇ ಬೆಂಗಳೂರಿನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ (೨೦೨೪) ಪಡೆದು, ನಂತರ ಪದ ಪ್ರಕಾಶನದಿಂದ ಪ್ರಕಟವಾಯಿತು. ೨೦೨೦ರಲ್ಲಿ ಮಂಗಳೂರಿನ TRF ‘ಯುವಕವಿ ಪ್ರಶಸ್ತಿ’ ಸೇರಿದಂತೆ ಹಲವು ಬಹುಮಾನಗಳು ಇವರಿಗೆ ಸಂದಿವೆ.

ವಿಜಯ ಕರ್ನಾಟಕ, ವಾರ್ತಾಭಾರತಿ, ಸನ್ಮಾರ್ಗ ಸೇರಿದಂತೆ ಹಲವು ಪತ್ರಿಕೆಗಳ ವಾರ್ಷಿಕ ವಿಶೇಷಾಂಕಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ. ಬದುಕು, ಪ್ರೀತಿ ಮತ್ತು ನೋವಿನ ಅನುಭವಗಳು ಇವರ ಕವನಗಳ ಜೀವಾಳ — ಸರಳ ಮಾತುಗಳಲ್ಲಿ ಆಳವಾದ ಭಾವನೆಗಳನ್ನು ಹೆಣೆಯುವುದು ಇವರ ಶೈಲಿ.

Avigyani is a young Kannada poet. His first collection ‘Anaamadheya Geerugalu’ won Bengaluru's Ee Hottige Kavya Award (2024) while still unpublished, and was then published by Pada Prakashana. His honours include the TRF Yuva Kavi Award (2020, Mangaluru). His poems have appeared in the annual special issues of Vijaya Karnataka, Varthabharati, Sanmarga and other newspapers. Life, love and pain are the soul of his poems.

ಮುನ್ನುಡಿಯಿಂದ · From the Foreword

“ಆಳಿದವರೇ ಮುಖ ಮರೆಸಿಕೊಳ್ಳಿ, ನನ್ನ ದೇಹದಲ್ಲೆಲ್ಲಾ ನೀವಿಟ್ಟ ಗೀರುಗಳಿವೆ” — ಇದು ಮಂಗಳೂರು ಜಿಲ್ಲೆಯ ಸಜೀಪನಡು ಗ್ರಾಮದವರಾದ ನಿಜಾಮ್ ಗೊಳಿಪಡ್ಪು ಅವರ “ಅನಾಮಧೇಯ ಗೀರುಗಳು” ಕವನಸಂಕಲನದ ಸಾಲುಗಳು. ಇವರ “ಅನಾಮಧೇಯ ಗೀರುಗಳು” ಕವನ ಸಂಕಲನಕ್ಕೆ ೨೦೨೪ರ ಪ್ರತಿಷ್ಟಿತ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ದೊರಕಿದ್ದಕ್ಕೆ ಅಭಿನಂದನೆಗಳು. ಕೇವಲ ಪಿಯುಸಿ ಓದಿ ಕೂಲಿಕೆಲಸ ಮಾಡುತ್ತಿರುವ ಚಿಕ್ಕ ವಯಸ್ಸಿನ ಪೋರ ಇಂತಹ ಕವಿತೆಗಳನ್ನು ಬರೆಯಬಲ್ಲನೆ ಎಂದು ನನಗೆ ಒಂದು ಕ್ಷಣ ಅನಿಸಿದ್ದುಂಟು. ಏಕೆಂದರೆ ನಿಜಾಮರವರ ಕವಿತೆಗಳು ಬಹಳ ಎತ್ತರದ ಕವಿತೆಗಳಾಗಿವೆ. ಪಾಬ್ಲೋ ನೆರೋದನು ಒಂದು ಪಕ್ಷಿಯ ಸಾವನ್ನು ನೋಡಿ ಬರೆದ ಮಾರ್ಮಿಕ ಕವಿತೆಯನ್ನು ನೋಡಿ ಅವರ ತಂದೆಯೂ ಈ ಪೋರ ಇಂತಹ ಕವಿತೆ ಬರೆಯಬಲ್ಲನೇ ಎಂದು ಅಂದುಕೊಂಡಿದ್ದರಂತೆ.

ಅವಿಜ್ಞಾನಿ ಹೆಸರಿನಲ್ಲಿ ಬರೆಯುತ್ತಿದ್ದ ಇವರು ಕನ್ನಡದ ಹೊಚ್ಚ ಹೊಸ ಪ್ರತಿಭೆ. ಇವರ ಬದುಕು, ಭವಣೆ, ಇಕ್ಕಟ್ಟು, ಸಂಕಷ್ಟ, ಸಂಭ್ರಮಗಳ ನಡುವೆ ಜೀಕಿದ ಜೀವನವೇ ಇವರ ಕಾವ್ಯವಾಗಿದೆ. ಇಲ್ಲಿಯ ಬಹುತೇಕ ಕವಿತೆಗಳು ಇಂತಹ ಜೀವನ ತತ್ವದ ಪಡಿಯಚ್ಚಾಗಿವೆ. ಹಲವಾರು ತಲ್ಲಣದ ಕ್ಷಣಗಳನ್ನು ಅವರು ನೋವಿನಾಳದ ಕೋಳವೆಯೊಳಗಿಂದ ನುಡಿಯುತ್ತಾರೆ. ಇವರ ಕವಿತೆಗಳಲ್ಲಿ ಒಂದು ಭಿನ್ನವಾದ ಲೋಕವಿದೆ. ಅದನ್ನು ಮುಸ್ಲಿಂ ಸಂವೇದನೆ ಎಂಬ ಚೌಕಟ್ಟಿಗೆ ಕೂಡಿಸಲಾಗದು. ಬದುಕಿನ ನೋವಿನ, ತಲ್ಲಣದ ಕ್ಷಣಗಳನ್ನು ಮತ್ತು ಬದುಕಿನ ವಿಷಾದ, ನಿಟ್ಟುಸಿರಿನ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಇಲ್ಲಿ ಹಿಡಿದಿಟ್ಟಿದ್ದಾರೆ. ನಿಜಾಮರವರ ಕವಿತೆಗಳಲ್ಲಿ ಬುದ್ಧಿ, ಭಾವ, ತರ್ಕ, ಶಬ್ದ, ಅರ್ಥಗಳೆಲ್ಲವೂ ಕರಗಿ ನೀರಾಗಿ ಸಂವೇದನಾ ಸ್ವರೂಪದಲ್ಲಿ ಹರಿವ ನದಿಯಾಗಿವೆ. ಇವರ ಕಾವ್ಯ ಸಹಜವಾಗಿ ಹರಿಯುತ್ತದೆ.

ಇವರ ಪ್ರಥಮಕೃತಿ “ಅನಾಮಧೇಯ ಗೀರುಗಳು” ಇವರಿಗೆ ಪ್ರಶಸ್ತಿಯನ್ನೂ ಸಹ ತಂದುಕೊಟ್ಟಿರುವುದಕ್ಕೆ ಅಭಿನಂದನೆಗಳು. ಈ ಮಹತ್ವದ ಕವಿಯನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದೂ ಆಗಿದೆ. ಅವರಿಂದ ಇನ್ನೂ ಮಹತ್ವದ ಕೃತಿಗಳು ಹೊರಬರಲೆಂಬ ಹಾರೈಕೆಗಳೊಂದಿಗೆ.

— ಡಾ. ಕೆ. ಷರೀಫಾ, ಬೆಂಗಳೂರು
🤖 ಅವಿಜ್ಞಾನಿ AI