ಗೆಳೆಯರ ಬಳಗ
ನನ್ನದು ತೀರಾ ಸಂಕೀರ್ಣ ಗೆಳೆಯರ ಬಳಗ,ಹೇಳಲು ಆಗುವುದಿಲ್ಲ,ಹೇಳಿದರೂ ಅರ್ಥವಾಗುವುದಿಲ್ಲ,ಅರ್ಥವಾದರೂ ನಂಬಲು ಆಗುವುದಿಲ್ಲ,ಹಸಿವಾಗ್ತಿದಿಯೋ ಅಂದರೆ "ಹು ನನಗೂ ಕೂಡ" ಅನ್ನೋರೆ ಇರೋ ಬೆರಳೆಣಿಕೆಯದ್ದು,ಎಣಿಸಿದರೆ ಮುಗಿಯುತ್ತದೆ,ಮುಗಿದರೆ ಉಳಿದವರು ಯಾರು,ಉಳಿದವರು ಇದ್ದಾರೆ,ಇದ್ದಾರೆ,ಇಲ್ಲವೆಂದಲ್ಲ,ಇದ್ದರೂ ಇಲ್ಲದಂತೆ,ಇಲ್ಲದಿದ್ದರೂ ಇದ್ದಂತೆ,ಇದೇ ಗಂಟು,ಗಂಟನ್ನು ಬಿಚ್ಚಲು ಹೋದರೆ ಗಂಟು ಜಾಸ್ತಿಯಾಗುತ್ತದೆ,ಗಂಟು ಜಾಸ್ತಿಯಾದರೆ ಬಿಚ್ಚುವುದೇ ಕಷ್ಟ,ಇರಲಿಬಿಡಿ,ಗಂಟು ಹಾಗೇ ಇರಲಿ.
ಕಾಟಚಾರಕ್ಕೆ ಎಲ್ಲರ ಬಳಿ ನನ್ನ ಪೋನ್ ಕೈ ಬಿಟ್ಟು ಹೋದ ಕರುಣಾಜನಕ ಕಥೆ ಹೇಳಿದಾಗ,ಕರುಣಾಜನಕ ನನಗೆ ಮಾತ್ರ,ಅವರಿಗೆ ಅಲ್ಲ,ಅವರಿಗೆ ಅದೊಂದು ಕಥೆ,ಕಥೆ ಕೇಳಿದವರು ನಕ್ಕರು,ನಗುವುದರಲ್ಲಿ ತಪ್ಪೇನಿಲ್ಲ,ನಗಬೇಕಾದ್ದಕ್ಕೆ ನಗುತ್ತಾರೆ,ನಗಬಾರದ್ದಕ್ಕೂ ನಗುತ್ತಾರೆ,ಒಳ್ಳೆಯದಾಯ್ತು ಬರೀ ಅದನ್ನೇ ನೀವುತ್ತಿದ್ದೆ ಈಗ ರೆಸ್ಟ್ ಸಿಗಲಿ ಅನ್ನುವ ವ್ಯಂಗ್ಯ ಬೇರೆ,ವ್ಯಂಗ್ಯ ಕೇಳಿದಾಗ ಏನು ಹೇಳುವುದು,ಏನೂ ಹೇಳುವುದಿಲ್ಲ,ಹೇಳಿದರೆ ಕಥೆ ಉದ್ದವಾಗುತ್ತದೆ,ಉದ್ದವಾದ ಕಥೆಯನ್ನು ಯಾರು ಕೇಳುತ್ತಾರೆ,ಯಾರೂ ಕೇಳುವುದಿಲ್ಲ,ಕೇಳಿದವರಿಗೆ ಅರ್ಥವಾಗುವುದಿಲ್ಲ,ಅರ್ಥವಾದವರಿಗೆ ಹೇಳಬೇಕಾಗಿಲ್ಲ,ಹೇಳಬೇಕಾಗಿಲ್ಲದವರೇ ಬೆರಳೆಣಿಕೆಯವರು,ಬಹುಶಃ ಅದೇ ಬಳಗ,ಹೇಳಬೇಕಾಗಿಲ್ಲದವರು,ಕಾಟಚಾರಕ್ಕೆ ಹೇಳುವುದು ಹೇಳಲೇಬೇಕೆಂದು ಹೇಳುವುದು,ಹೇಳದಿದ್ದರೆ ಕೇಳುತ್ತಾರೆ,ಕೇಳಿದರೆ ಹೇಳಲೇಬೇಕು,ಹೇಳಿದರೆ ನಗುತ್ತಾರೆ,ನಗುವುದೆಂದು ಗೊತ್ತಿದ್ದರೂ ಹೇಳುತ್ತೇನೆ,ಹೇಳುವುದೇ ಕಾಟಚಾರ,ಕಾಟಚಾರವಿಲ್ಲದಿದ್ದರೆ ಬಳಗವಿಲ್ಲ,ಬಳಗವಿಲ್ಲದಿದ್ದರೆ ಯಾರಿದ್ದಾರೆ,ಯಾರೂ ಇಲ್ಲ.
ಬೆರಳೆಣಿಕೆಯವರಿಗೆ ಕಥೆ ಹೇಳಬೇಕಾಗಿಲ್ಲ,ಹೇಳದಿದ್ದರೂ ಗೊತ್ತು,ಗೊತ್ತಿದ್ದರೂ ಕೇಳುವುದಿಲ್ಲ,ಕೇಳದಿದ್ದರೂ ಜೊತೆಗಿರುತ್ತಾರೆ,ಏನೂ ಮಾಡದೇ ಇರುತ್ತಾರೆ,ಏನೂ ಮಾಡದೇ ಇರುವುದೇ ದೊಡ್ಡ ಕೆಲಸ,ಕೆಲಸವಿಲ್ಲದ ಜೊತೆ,ಮಾತಿಲ್ಲದ ಜೊತೆ,ಮಾತಿಲ್ಲದಿದ್ದರೂ ಅರ್ಥವಾಗುತ್ತದೆ,ಅರ್ಥವಾದರೆ ಸಾಕು,ಸಾಕಾದರೆ ಮುಗಿಯಿತು,ಮುಗಿದರೂ ಜೊತೆ ಮುಗಿಯುವುದಿಲ್ಲ,ಜೊತೆ ಮುಗಿಯದಿರುವುದೇ ಬಳಗ,ಮುಗಿಯದ ಜೊತೆಗೆ ಕಥೆ ಬೇಕಿಲ್ಲ,ಕಥೆ ಬೇಕಿಲ್ಲದ್ದೇ ನಿಜವಾದ ಬಳಗ,ಬಹುಶಃ ಹಾಗೇನೇ,ಹಾಗೇ ಇರಲಿ.
ಹಕೀಕತ್ತು ಇದಲ್ಲ,ಹಕೀಕತ್ತು ಬೇರೆ,ತಮ್ಮ ಕಿಸೆಗಳು ಗಾಳಿ ಆಡುವ ಮೈದಾನವೆಂದರೆ ಪ್ರತಿಷ್ಠೆಗೆ ಧಕ್ಕೆ,ಧಕ್ಕೆ ಆಗದಂತೆ ನೋಡಿಕೊಳ್ಳಬೇಕು,ನೋಡಿಕೊಳ್ಳಲು ಬುದ್ಧಿ ಹೇಳುತ್ತಾರೆ,ಬುದ್ಧಿ ಹೇಳಿದರೆ ತಮ್ಮ ತೂತು ಮರೆಮಾಚಿದಂತೆ,ಮರೆಮಾಚಿದರೆ ತೃಪ್ತಿ,ತೃಪ್ತಿಯಾದರೆ ಮುಗಿಯಿತು,ಮುಗಿದರೆ ಮತ್ತೆ ಅದೇ ದಿನಚರಿ,ಅದೇ ಖಾಲಿ ಕಿಸೆ,ಅದೇ ತುಂಬಿದ ಮಾತು,ಖಾಲಿ ಕಿಸೆಯವರು ತುಂಬಿದ ಮಾತು ಆಡುತ್ತಾರೆ,ತುಂಬಿದ ಮಾತು ಆಡಿದರೆ ಖಾಲಿ ಮರೆಯಾಗುತ್ತದೆ,ಮರೆಯಾದರೆ ಚೆನ್ನ,ಮರೆಯದಿದ್ದರೆ ಏನು ಮಾಡುವುದು,ಏನೂ ಮಾಡುವುದಿಲ್ಲ,ನಗುತ್ತಾರೆ,ನಗುವಿನ ಹಿಂದೆ ಖಾಲಿ,ಖಾಲಿಯ ಹಿಂದೆ ನಗು,ಎರಡೂ ಒಟ್ಟಿಗೆ ಹೋಗುತ್ತವೆ,ಹೋಗಲಿ,ಹೋಗುವುದೇ ಬಳಗದ ನಿಯಮ.
ನಮ್ಮ ದೇವರ ಸತ್ಯಗಳು ನಮಗೆ ತಾನೇ ಗೊತ್ತು,ಗೊತ್ತಿದ್ದರೂ ಹೇಳುವುದಿಲ್ಲ,ಹೇಳಿದರೂ ನಂಬುವುದಿಲ್ಲ,ನಂಬಿದರೂ ಕೇಳುವುದಿಲ್ಲ,ಇರಲಿಬಿಡಿ,ಸತ್ಯ ಗೊತ್ತಿರುವುದೇ ಸಾಕು,ಸಾಕಾಗದಿದ್ದರೆ ಏನು ಮಾಡುವುದು,ಏನೂ ಮಾಡುವುದಿಲ್ಲ,ಬಳಗ ಹಾಗೇ ಇರುತ್ತದೆ,ಗಂಟು ಹಾಗೇ ಇರುತ್ತದೆ,ಬೆರಳೆಣಿಕೆ ಹಾಗೇ ಇರುತ್ತದೆ,ಮುಂದೆ?....ಬದುಕಿದರೆ ನೋಡೋಣ..!
-ಅವಿಜ್ಞಾನಿ
ಇನ್ನೂ ಓದಿ: ಲೇಖನಗಳು
