ಗಲ್ಫ್
ಗಲ್ಫ್ ರಾಷ್ಟ್ರಗಳಲ್ಲಿ ಎಂಬತ್ತು ಲಕ್ಷಕ್ಕೂ ಅಧಿಕ ಜನರು ಇರುವುದಾಗಿ ಹೇಳಲಾಗುತ್ತದೆ,ಯಾರೋ ಲೆಕ್ಕ ಹಾಕಿದ್ದಾರೆ,ಲೆಕ್ಕದ ಹಿಂದೆ ಮನುಷ್ಯರಿದ್ದಾರೆ,ಮನುಷ್ಯರ ಹಿಂದೆ ಕುಟುಂಬಗಳಿವೆ,ಕುಟುಂಬಗಳ ಹಿಂದೆ ಊಟವಿದೆ,ಅದರಲ್ಲಿ ಎಷ್ಟು ಪ್ರತಿಶತ ದೊಡ್ಡ ಉದ್ಯೋಗಿಗಳು ಇರಬಹುದು? ಆ ಅಂಕಿಅಂಶಗಳನ್ನು ತೆಗೆದು ನೋಡಿದರೆ ಬೆರಳೆಣಿಕೆಯಷ್ಟೇ,ಮತ್ತೆಲ್ಲ ಜನರೂ ದೈಹಿಕ ಶ್ರಮ ಬೇಡುವ ಕೆಲಸಗಳಲ್ಲಿ,ದಿನಗೂಲಿಗಳಾಗಿ,ಮನೆಯಾಳುಗಳಾಗಿ,ಪೌರಕಾರ್ಮಿಕರಾಗಿ ದುಡಿಯುವುವರೇ ಆಗಿದ್ದಾರೆ,ಬೆಳಿಗ್ಗೆಯಿಂದ ಸಂಜೆಯವರೆಗೆ ದೇಹವನ್ನೇ ದುಡ್ಡಾಗಿ ಮಾಡುತ್ತಾರೆ,ದೇಹ ದುಡ್ಡಾದರೆ ಮನೆಗೆ ಹಣ ಹೋಗುತ್ತದೆ,ಹಣ ಹೋದರೆ ಊಟವಾಗುತ್ತದೆ,ಊಟವಾದರೆ ನಾಳೆಯೂ ದೇಹ ದುಡಿಯುತ್ತದೆ,ಇದೇ ಚಕ್ರ,ಚಕ್ರ ನಿಂತರೆ ಎಲ್ಲವೂ ನಿಲ್ಲುತ್ತದೆ.
ದೂರದ ದೇಶದಲ್ಲಿ ಬಿಸಿಲು ಬೇರೆಯಲ್ಲ,ಬೆವರು ಬೇರೆಯಲ್ಲ,ದಣಿವು ಬೇರೆಯಲ್ಲ,ಬೇರೆಯಾಗಿರುವುದು ಒಂದೇ,ಮನೆ ದೂರ,ಮನೆಯವರ ಮುಖ ದೂರ,ಮುಖ ನೋಡಬೇಕೆಂದರೆ ಪೋನ್,ಪೋನ್ ನೋಡಿದರೆ ಮುಖ ಕಾಣುತ್ತದೆ,ಮುಖ ಕಂಡರೆ ಸಮಾಧಾನವಾಗುತ್ತದೆ,ಸಮಾಧಾನವಾದರೆ ಮತ್ತೆ ಕೆಲಸ,ಮತ್ತೆ ಬೆವರು,ಮತ್ತೆ ಅದೇ ದಿನ,ದಿನ ಹೋದಂತೆ ತಿಂಗಳು,ತಿಂಗಳು ಹೋದಂತೆ ವರ್ಷ,ವರ್ಷ ಹೋದಂತೆ ಮನೆಗೆ ಹಣ,ಮನೆಗೆ ಹಣ ಹೋದಂತೆ ಊಟ,ಊಟವಾದಂತೆ ನಿದ್ದೆ,ನಿದ್ದೆಯಲ್ಲೂ ಅದೇ ಲೆಕ್ಕ,ಬಹುಶಃ ಲೆಕ್ಕಕ್ಕೆ ನಿದ್ದೆಯಿಲ್ಲ.
ಪಾಕಿಸ್ತಾನ,ಬಾಂಗ್ಲ,ಇಂಡೋನೇಷ್ಯ,ಪಿಲಿಪೇನ್ಸ್ ಗಳು ಬಹಳವಾಗಿಯೇ ಗಲ್ಫ್ ರಾಷ್ಟ್ರದ ಕೆಲಸದ ಮೇಲೆ ಕಣ್ಣಿಟ್ಟಿರುವಾಗ,ಕಾಯುತ್ತಿರುವವರು ಬಹಳ,ಕೆಲಸ ಕಡಿಮೆ,ಕೆಲಸ ಕಡಿಮೆಯಾದಾಗ ಒಂದು ಮಾತು ಸಾಕು,ಒಂದು ಹೇಳಿಕೆ ಸಾಕು,ಒಬ್ಬ ಮನುಷ್ಯ ಕೆಲಸ ಕಳೆದುಕೊಳ್ಳಲು,ಕೆಲಸ ಕಳೆದುಕೊಂಡವನು ಏನು ಮಾಡುತ್ತಾನೆ,ಊರಿಗೆ ಹಿಂದಿರುಗುತ್ತಾನೆ,ಊರಿನಲ್ಲಿ ಏನಿದೆ,ಅದೇ ಹಸಿವು,ಅದೇ ಸಾಲ,ಅದೇ ದಿನಚರಿ,ಬಹುಶಃ ಅದಕ್ಕಿಂತ ಕೆಟ್ಟದ್ದು,ಹೋದವನು ಹಿಂದಿರುಗಿದಾಗ ಕೈ ಖಾಲಿ,ಖಾಲಿ ಕೈಯಲ್ಲಿ ಏನು ಹೇಳುವುದು,ಯಾರಿಗೆ ಹೇಳುವುದು.
ಕೆಲಸ ಹೋದವನು ಊರಿಗೆ ಹಿಂದಿರುಗಿದಾಗ ಏನು ಹೇಳುತ್ತಾನೆ,ಹೇಳಲು ಏನಿದೆ,ಕೆಲಸ ಹೋಯಿತು ಎಂದು ಹೇಳುತ್ತಾನೆ,ಹೇಳಿದರೆ ಕೇಳುವವರು ಏನು ಹೇಳುತ್ತಾರೆ,ಏನೂ ಹೇಳುವುದಿಲ್ಲ,ಹೇಳಲು ಏನಿದೆ,ಖಾಲಿ ಕೈ ನೋಡಿದರೆ ಸಾಕು,ಖಾಲಿ ಕೈಯೇ ಕಥೆ,ಕಥೆಗೆ ಮಾತು ಬೇಕಿಲ್ಲ,ಮಾತು ಬೇಕಿಲ್ಲದ ಕಥೆಯೇ ದೊಡ್ಡ ಕಥೆ,ಇರಲಿಬಿಡಿ,ಹಿಂದಿರುಗಿದವನು ಮತ್ತೆ ಹೊರಡಲು ಕಾಯುತ್ತಾನೆ,ಕಾಯುವುದೇ ನಂಬುವುದು,ನಂಬುವುದೇ ಮತ್ತೆ ಅದೇ ಚಕ್ರ,ಚಕ್ರ ತಿರುಗಿದರೆ ಮತ್ತೆ ಅದೇ ದೂರ,ಅದೇ ಬಿಸಿಲು,ಅದೇ ಬೆವರು.
ನಾಳೆಯ ಊಟದ ಕುರಿತು ಯಾವುದೇ ತಲೆಬಿಸಿ ಇಲ್ಲದೇ ಮಾತನಾಡುವವರಿಗೆ ಈ ಲೆಕ್ಕ ಗೊತ್ತಾಗುವುದಿಲ್ಲ,ಗೊತ್ತಾದರೂ ಯೋಚಿಸುವುದಿಲ್ಲ,ಯೋಚಿಸಿದ್ದರೆ ಮಾತು ಬೇರೆಯಾಗಿರುತ್ತಿತ್ತು,ಮಾತು ಬೇರೆಯಾಗಿದ್ದರೆ ಕೆಲಸ ಉಳಿಯುತ್ತಿತ್ತು,ಕೆಲಸ ಉಳಿದಿದ್ದರೆ ಊಟ ಉಳಿಯುತ್ತಿತ್ತು,ಇದು ಸರಳ ಲೆಕ್ಕ,ಸರಳ ಲೆಕ್ಕವನ್ನು ಕಷ್ಟ ಮಾಡುವುದು ಯಾರು,ಹೊಟ್ಟೆ ತುಂಬಿದವರು,ಹೊಟ್ಟೆ ತುಂಬಿದವರ ಮಾತು ಹಸಿದವನ ಹೊಟ್ಟೆಯ ಮೇಲೆ ಬೀಳುತ್ತದೆ,ಬಿದ್ದಾಗ ಶಬ್ದವಾಗುವುದಿಲ್ಲ,ಶಬ್ದವಾಗದ ಹೊಡೆತವೇ ದೊಡ್ಡ ಹೊಡೆತ,ಇರಲಿಬಿಡಿ,ಹೇಳಿ ಏನು ಪ್ರಯೋಜನ,ಹೇಳಿದರೂ ಕೇಳುವವರಿಲ್ಲ,ಕೇಳಿದರೂ ಅರ್ಥವಾಗುವವರಿಲ್ಲ.
ಇನ್ನಾದರೂ ಹಸಿದವನ ಹೊಟ್ಟೆಯ ಮೇಲೆ ಹೊಡೆಯದಿರಲಿಯೆಂದು ಆಶಿಸುವುದಷ್ಟೇ ಉಳಿದಿದೆ,ಆಶೆ ಉಳಿದಿದೆ,ಆಶೆಯಲ್ಲೇ ದಿನ ಹೋಗುತ್ತದೆ,ದಿನ ಹೋದರೆ ನಾಳೆ ಬರುತ್ತದೆ,ನಾಳೆ ಏನು ತರುತ್ತದೋ ಗೊತ್ತಿಲ್ಲ,ನೋಡೋಣ..!
-ಅವಿಜ್ಞಾನಿ
ಇನ್ನೂ ಓದಿ: ಲೇಖನಗಳು
