ಬದುಕಿದ ಹನಿಗಳು
45 ಹನಿಗಳು · drops


ಹನಿ 2
ದಿನಾ ಸಾಯುವುದನ್ನು
ಕಲಿತಿದ್ದೇನೆ ಬದುಕೇ
ಬದುಕುವುದನ್ನೊಮ್ಮೆ
ಕಲಿಸಿಕೊಡು.!
-ಅವಿಜ್ಞಾನಿ

ಹನಿ 3
ಡೊಂಕಾಗಿ ನಡೆದಾಗ
ಮುಸಿ ನಗುವ ಸಂತೆಯವರು
ಕಾಲ ಊತದ ಕುರಿತು
ತರ್ಕಿಸಿದ್ದಿಲ್ಲ.!
-ಅವಿಜ್ಞಾನಿ




ಹನಿ 7
ನನ್ನ ದಿನಮಾನದ
ಗಡಿಯಾರ ಬಿಕ್ಕುವುದನ್ನಷ್ಟೇ
ಕಲಿತುಕೊಂಡಿದೆ
ಮತ್ತು ನಾನೂ..!
-ಅವಿಜ್ಞಾನಿ


ಹನಿ 9
ದಲ್ಲಾಳಿತನದ
ಜಗತ್ತಿದು
'ಫಕೀರಾ,
ನಿನ್ನ ಕಫನ್ ಕೂಡ
ಲಾಭದ ಲೆಕ್ಕಾಚಾರಕ್ಕೆ
ಬಟವಾಡೆಯಾಗುತ್ತದೆ.!
-ಅವಿಜ್ಞಾನಿ



ಹನಿ 12
ಬದುಕ ಬಗ್ಗೆ
ರಮ್ಯವಾಗಿ ಬರೆದವ
ತನ್ನ ನಿಜಾಯಿತಿಯ
ದಾಖಲಾತಿ ಮಾಡಲಾಗದೇ
ಮರಗುತ್ತಾನೆ.!
-ಅವಿಜ್ಞಾನಿ


ಹನಿ 14
ನೀ ನೀನಾಗಿಯೇ ಇರು
'ಅವಿ,
ಇಲ್ಲಿಯವರಿಗೆ
ಸಂತನಾಗುವಷ್ಟು ಹಪಾಹಪಿ
ಮನುಷ್ಯನಾಗಲು ಇಲ್ಲ.!
-ಅವಿಜ್ಞಾನಿ

ಹನಿ 15
ಬದುಕಿಗಾಗಿ
ಬಾಗುತ್ತೇನೆ ಬಹಳವೇ
ದಕ್ಕಿದ್ದು ಬೆನ್ನುಲುಬ ನೆಟ್ಟಿಗೆ
ಮುರಿಯುವ ಸದ್ದಷ್ಟೇ.!
-ಅವಿಜ್ಞಾನಿ



ಹನಿ 18
ನಿನ್ನ ಹಿಸಾಬಿನ
ಅಳತೆಗೋಲು
ಸರಿಯಿರಲಿ ಖುದಾ
ಬೆವರ ಲೆಕ್ಕ ಹೇಳಲಿಕ್ಕಿದೆ
ನನಗೆ..!
-ಅವಿಜ್ಞಾನಿ

ಹನಿ 19
ಸೋಲಿನ ಕುರಿತು ಪರಾಧಿ
ಇಲ್ಲ ನನಗೆ
ನಸೀಬಿನ ಗೆರೆಯೇ
ಅಳಿದ ಹುಡುಗ ನಾನು..!
-ಅವಿಜ್ಞಾನಿ

ಹನಿ 20
ಧ್ಯಾನಸ್ಥ ಹೂವಿನ ಮೌನ
ಮರಣ ಮೃದುಂಗವಾಗಿದೆ ಈಗ
ಪಕಳೆಯ ಮಿಡಿತ ಮಸಣದ
ಕೂಗು.!
-ಅವಿಜ್ಞಾನಿ

ಹನಿ 21
ನನ್ನ ಪರಿತಾಪಗಳು
ನಿನ್ನ ಸಂತಾಪದ
ಹುಕಿಗಾಗಿ ಅಲ್ಲ,
ಬದುಕು ದಕ್ಕದ ಸಲುವಾಗಿ..!!
-ಅವಿಜ್ಞಾನಿ

ಹನಿ 22
ನನ್ನ ಕಡದ ಕೈ
ಕೊಳೆಯಾಗಿ ಕಾಣಬಹುದು
ಒರೆಸಿಕೋ ಕಣ್ಣ
ಮಸಿ ಮೈಯಲಲ್ಲ
ಮನಸ್ಸಿನಲ್ಲಾಗಿದೆ ನಿನ್ನ.!
-ಅವಿಜ್ಞಾನಿ

ಹನಿ 23
ಪ್ರೀತಿ ಪ್ರೇಮ
ಕಾಮದ ಕುರಿತು
ರಮಣೀಯವಾಗಿ
ಬರೆಯಬಹುದಾಗಿತ್ತು
ಹಸಿವಿರದಿದ್ದರೆ.!
-ಅವಿಜ್ಞಾನಿ

ಹನಿ 24
ಬೆರಳು ಚಾಚದಿರಿ
ನನ್ನತ್ತ ಕವಿಯೆಂದು
ಬೆಸೆಯಲಾರೆ ಗೆರೆಯನ್ನು
ಬದುಕಿರದರಲ್ಲಿ.!
-ಅವಿಜ್ಞಾನಿ

ಹನಿ 25
ರಾತ್ರಿಗಳೆಷ್ಟೋ ಜಾರಿ ಹೋದವು
ಕನಸ ದೀಪ ಆರದಿರಲೆಂಬ
ಪ್ರಾರ್ಥನೆಯಲ್ಲಿ
ಗೀರ ಬೊಗಸೆ ನನ್ನದು ಖುದಾ
ಹರಿಯದಿರು ಇನ್ನೂ ತುಸು
ಹೊಲಿಗೆ ನೂಲೂ ಖಾಲಿ ಇಲ್ಲಿ.!
-ಅವಿಜ್ಞಾನಿ

ಹನಿ 26
ನನ್ನ ಹಾಡಿಯ
ಕತ್ತಲ ಹಾಡು
ನುಡಿಸಿಕೊಳ್ಳುತ್ತದೆ
ಮುಳ್ಳು ತಂತಿಯ ರಾಗವ
ನೋವ ಸ್ವರಗಳಿಂದ
ಕೇಳಬೇಡ ನೀನು
ತಾಳ್ಭಾಗದ ಸುರೆಯ
ಸ್ವಾದದ ನಿರೀಕ್ಷೆಯಲ್ಲಿ.!
-ಅವಿಜ್ಞಾನಿ

ಹನಿ 27
ನಿನ್ನ ಸನ್ಮಾನಗಳ
ಬೆಂಕಿ ನನ್ನ ಸುಡದಿರಲಿ
ನಾನು ಬಿಟ್ಟು
ಬಯಲ ಹಿಡಿದಿದ್ದೇನೆ
ಬೆತ್ತಲಾಗಿ
ಬಾ ಇಲ್ಲಿ ವಿರಮಿಸು
ನಾನಿಲ್ಲದ ಜಗತ್ತು
ಅದೆಷ್ಟು ರಮ್ಯ.!
-ಅವಿಜ್ಞಾನಿ

ಹನಿ 28
ಆಟಿಕೆಗಳಿದ್ದವು
ನಿನ್ನವೇ ಬಹಳಷ್ಟು
ಖುದಾ
ನನ್ನ ಬದುಕಲ್ಲಿ
ಆಡುವುದರಲ್ಲೇನು
ಉತ್ಸುಕತೆ..!
-ಅವಿಜ್ಞಾನಿ

ಹನಿ 29
ನವಿಲು ನೀನು
ಗರಿಬಿಚ್ಚು ಯಥೇಚ್ಛವಾಗಿ
ರೆಕ್ಕೆ ಮುರಿದ
ನನ್ನ ಹಾಡು ಕೇಳುವಂತದ್ದಲ್ಲ.!
-ಅವಿಜ್ಞಾನಿ

ಹನಿ 30
ನನ್ನ ಸಾವಾದರೂ
ಸುದ್ಧಿಯಾಗಬೇಕು
ಅಂದಾದರೂ
ಅರಿಯಬಹುದು
ನಾ ಬದುಕಿದ್ದರ ಕುರಿತು
ಈ ಕುರುಡು ಜಗತ್ತು.!
-ಅವಿಜ್ಞಾನಿ


ಹನಿ 32
ಸಾವು ಕೂಡ
ಉಡಾಫೆ ಮಾಡುವ
ಧರವೇಸಿಯ ಧೈನ್ಯತೆಗೆ
ಲೋಕ ಮರುಗುತ್ತದೆ
ಬಹಳವೇ.!
-ಅವಿಜ್ಞಾನಿ



ಹನಿ 35
ಖಾಲಿ ಕೈ ಹುಡುಗನ
ಕನಸುಗಳೂ ಲಾಟರಿ
ಟಿಕೇಟಿನಂತೆ
ಅಗಾಧ ಬಹಳವೇ
ದಕ್ಕುವುದಷ್ಟೇ
ಶೂನ್ಯ..!
-ಅವಿಜ್ಞಾನಿ

ಹನಿ 36
ಯಾವ ಕೈಗಳಿಲ್ಲ
ತಳಹದಿಯ
ಮೇಲೆತ್ತಲು
'ಅವಿ,
ಇಲ್ಲಿ
ಕೈ ಬೀಸುವುದನ್ನೇ
ರೂಢಿಸಿಕೊಂಡವರಿದ್ದಾರೆ.!
-ಅವಿಜ್ಞಾನಿ

ಹನಿ 37
ಅಸಲಿಯಾಗಿ ನಗಲಾಗದ
ನಾನು ನಕಲಿಯಾಗಿ
ಯಾರನ್ನೂ ನಗಿಸಿದ್ದಿಲ್ಲ
ಬದುಕೇ ನೀ ಅದೆಷ್ಟು
ಸೋಜಿಗ.!
-ಅವಿಜ್ಞಾನಿ




ಹನಿ 41
ನಿನ್ನ ದಿನಗಳಾದರೂ
ಹಸಿರೆಲೆಯ ನಗುವಾಗಲಿ
ಬಾಡುವುದು ನಾನು
ಕಲಿತುಕೊಂಡು ಬಿಟ್ಟಿದ್ದೇನೆ.!
-ಅವಿಜ್ಞಾನಿ

ಹನಿ 42
ಇನ್ನೊಂದು
ದುರ್ಗಮ ದಿನ
ದುಗುಡ ಕವಿತೆ
ಹಾಗೂ
ಸ್ವರ್ಗದ ತೋಪಿನಲ್ಲಿ
ಬರೆಯದ ನನ್ನೀ
ದಿನಚರಿ..!
-ಅವಿಜ್ಞಾನಿ

ಹನಿ 43
ಉಳಿಯುತ್ತವೆ ದಾರಿ
ಮುಗಿದ ಮೇಲೂ
ನನ್ನ ನಡಿಗೆ
ಹೆಜ್ಜೆಗಿಲ್ಲಿ ತಕರಾರಿಲ್ಲ
ಗುರಿಯ ಬಗೆಗೆ..!
-ಅವಿಜ್ಞಾನಿ


ಹನಿ 45
ನೀವು ಕೇಳಬಹುದು
ಬದುಕೆಷ್ಟು ಕಂಡೆ ನೀನು
ಉಗುರ ಮೇಲೆ ನಿಂತು
ಶ್ವಾಸಿಸಿಕೊಳ್ಳುವಷ್ಟೆಂದು
ಹೇಳಬಲ್ಲೆ ಆಗ....!
-ಅವಿಜ್ಞಾನಿ
