ಕನಸಿನ ಕವನಗಳು Dream Poems
ಕನಸಿನ ಬಗ್ಗೆ ಬರೆದ ಕವನಗಳು. ಕನಸು, ನಿರೀಕ್ಷೆ, ಕಾಣದ ಬೆಳಕು.

ಕನಸು ಸಿಕ್ಕಲಾರೆ
ಕನಸು ಸಿಕ್ಕಲಾರೆ
ಕಡದ ಕೈಯೊಳಗೆ ಎಂದಿತು
ಹಾರಲು ಬಿಟ್ಟೆ
ದಡ ಸಿಕ್ಕದ ಹನಿಗೆ
ಬದುಕು ದಕ್ಕಲಾರೆ ಎಂದಿತು
ಹರಿಯಲು ಬಿಟ್ಟೆ
-ಅವಿಜ್ಞಾನಿ

ಇದು ಮೊದಲೇನಲ್ಲ
ಇದು ಮೊದಲೇನಲ್ಲ
ತಿಳಿದಿದ್ದೇನೆ ಕೊನೆಯೂ
ಆಗಲಾರದು
ನಿಗಿ ಕೆಂಡವ ಕೆನ್ನೆಗೆ
ಸವರಿ
ಬೆಳಕ ಬೆರಳನ್ನು ಹುಡುಕುವ
…
-ಅವಿಜ್ಞಾನಿ

ಹನಿ 25
ರಾತ್ರಿಗಳೆಷ್ಟೋ ಜಾರಿ ಹೋದವು
ಕನಸ ದೀಪ ಆರದಿರಲೆಂಬ
ಪ್ರಾರ್ಥನೆಯಲ್ಲಿ
ಗೀರ ಬೊಗಸೆ ನನ್ನದು ಖುದಾ
ಹರಿಯದಿರು ಇನ್ನೂ ತುಸು
ಹೊಲಿಗೆ ನೂಲೂ ಖಾಲಿ ಇಲ್ಲಿ.!
-ಅವಿಜ್ಞಾನಿ

ಹನಿ 35
ಖಾಲಿ ಕೈ ಹುಡುಗನ
ಕನಸುಗಳೂ ಲಾಟರಿ
ಟಿಕೇಟಿನಂತೆ
ಅಗಾಧ ಬಹಳವೇ
ದಕ್ಕುವುದಷ್ಟೇ
ಶೂನ್ಯ..!
-ಅವಿಜ್ಞಾನಿ

ಹನಿ 41
ನಿನ್ನ ದಿನಗಳಾದರೂ
ಹಸಿರೆಲೆಯ ನಗುವಾಗಲಿ
ಬಾಡುವುದು ನಾನು
ಕಲಿತುಕೊಂಡು ಬಿಟ್ಟಿದ್ದೇನೆ.!
-ಅವಿಜ್ಞಾನಿ
