ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಕನಸು ಸಿಕ್ಕಲಾರೆ

ಕನಸು ಸಿಕ್ಕಲಾರೆ

ಕನಸು ಸಿಕ್ಕಲಾರೆ ಕಡದ ಕೈಯೊಳಗೆ ಎಂದಿತು ಹಾರಲು ಬಿಟ್ಟೆ ದಡ ಸಿಕ್ಕದ ಹನಿಗೆ ಬದುಕು ದಕ್ಕಲಾರೆ ಎಂದಿತು ಹರಿಯಲು ಬಿಟ್ಟೆ ನೋವ ಗುಡಿಸಿ ಗುಡಿಸಿ ಸೂಡಿ ಸವೆದದ್ದೇ ತೂಕ ಬರಡು ಬೋಳಿನ ಮರಕೆ ನಲಿವು ನಿಲುಕಲಾರೆ ಎಂದಿತು ತೊರೆದು ಬಿಟ್ಟೆ ಬಿಕ್ಕಳಿಕೆಯ ಕಚ್ಚಿ ಕಚ್ಚಿ ಹದ ಮಾಡ ಕಲಿತಿದ್ದೇನೆ ದೊಗರು ಮುಖದ ಗೀರಿನ ಮೇಲೆ ಮುಗುಳು ನಗೆ ಮೂಡಲಾರೆ ಎಂದಿತು ಮನ್ನಿಸಿ ಬಿಟ್ಟೆ ಸವೆದ ಚಪ್ಪಲಿ ನನ್ನ ಪಾದದ ಗುರುತು ಹೇಳುತ್ತದೆ ತಿಳಿದುಕೋ ವಿಳಾಸವಿರದ ನಡಿಗೆಗೆ ಆಶ್ವಾಸನೆ ನಿಲ್ಲಲಾರೆ ಎಂದಿತು ಮರೆತು ಬಿಟ್ಟೆ ಏನುಂಟು ಏನಿಲ್ಲ ನನ್ನ ಖಾಲಿ ಜೋಳಿಗೆಯಲ್ಲಿ ಇಣುಕುತ್ತದೆ ಈ ಜಮಾನ ಬೆವರು ಬಸಿದ ಕಥೆಯಷ್ಟೇ ಎಂದಿತು ಹಾಳೆ ಹರಿದು ಬಿಟ್ಟೆ ಬಿಡುವುದೇ ಬದುಕು ಹಿಡಿದುಕೊಳ್ಳುವುದಲ್ಲ ಪ್ರಿಯ ಹುಡುಗ ಜಗತ್ತಿನ ನಾಜೂಕುತನ ಒಗ್ಗಲಾರೆ ಎಂದಿತುಮರೆತು ಬಿಟ್ಟೆ..!
-ಅವಿಜ್ಞಾನಿ
ಇನ್ನೂ ಓದಿ: ಇದು ಮೊದಲೇನಲ್ಲ · ಹನಿ 25 · ಹನಿ 35
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI