
ನಾನು ಹೀಗೆಯೇ
ನಾನು ಹೀಗೆಯೇ
ಬದುಕಿಹೋಗುತ್ತೇನೆ
ಕಾಡು ಹೂವಂತೆ
ಅನಾಮಿಕ ಗಾಳಿಯಂತೆ
ಯಾವ ಗುರುತೂ
ಉಳಿಸಿಕೊಳ್ಳದ
ದೊಪ್ಪನೆ ಬಿದ್ದ ಮಳೆ
ಹನಿಯಂತೆ
ನನ್ನ ಜಾಡು
ಹಿಡಿಯಬೇಡ
ಮುಳ್ಳುಗಳಿರಬಹುದು
ನಿನ್ನ ಪಾದದ ಕಾಳಜಿ
ನನಗೆ
ಅಂದೂಕೋ
ನಾ ಬರಿಯ ಮಿಂಚೆಂದು
ಕ್ಷಣದಲ್ಲಿ ಶೂನ್ಯ
ಸೇರುತ್ತೇನೆ
ಬದಲಾಗಿ
ಬಿಡದೇ ಸುರಿಯುವ
ಆಟಿ ಮಳೆಯಾಗಲಾರೆ
ನಾ ಮಿಣುಕಿ
ಹೋಗುವ ಕಣ್ಣನ್ನೇ
ಅಥವಾ
ನಯವಾಗಿ ಜಾರಿಹೋಗುವ
ಹೆಸರಿಲ್ಲದ ಸಮಯ
ಶ್ವಾಸ ಆಗಿರಲಾರೆ
ಬದುಕುವಷ್ಟು
ಎಳೆದಳೆದು ಬಿಡಲು
ಹೀಗೆಯೇ
ಬದುಕಿಬಿಡುತ್ತೇನೆ
ದಕ್ಕಿದ್ದನ್ನು ನೋಯುತ್ತಾ
ನೊಂದ ಸಲುವಾಗಿ
ಬೇಯುತ್ತಾ
ನಗುವಾಗಲಾರೆ ಎಂದಿಗೂ
ತುಟಿಯಂಚಲಿನಿನ್ನ ಸ್ವಂತದ್ದಿರುವಂತೆ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments