ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home

ಬದುಕಿನ ಕವನಗಳು Life Poems

ಬದುಕಿನ ಬಗ್ಗೆ ಬರೆದ ಕವನಗಳು. ಬದುಕು ಕಲಿಸಿದ ಪಾಠ, ಅದರ ನೋವು, ಅದರ ಸೋಜಿಗ.

ಬದುಕಿಗೆ ರಂಗು

ಬದುಕಿಗೆ ರಂಗು

ಬದುಕಿಗೆ ರಂಗು ಮೆತ್ತುವ ಈ ಉಸಾಬರಿ, ಶತಮಾನಗಳಿಂದ ನನ್ನ ಬೆನ್ನು ತೊರೆದಿಲ್ಲ. ಇನ್ನೂ ರೂಪ ಬೇಕು, ರೂಪ ಬೇಕು ಎನ್ನುವ ಸದ್ಧಿಗೆ, ಕುಂಚದ ಕಣ್ಣೀರಷ್ಟೇ ಇಂಗಿ ಹೋಗುತ್ತಿದೆ. ಪ್ರೀತಿಯ ಬಣ್ಣ ಹಚ್ಚಿದಾಗ, ಮೋಸದ ಚಿತ್ತಾರವೂ ಅರಳುತ್ತದೆ. ಪ್ರೇಮದ ಚಿನ್ಹೆ ಇಟ್ಟಲ್ಲಿ, ಕಾಮದ ಮೊಗ್ಗು. ನಲಿವಿನ ನೆರಳಾಡಿಸಿದ್ದಷ್ಟೇ, ದುಃಖ ಸಾಗರವೇ ಹರಿಯತೊಡಗುತ್ತದೆ. ಕ್ಯಾನ್ವಾಸ್ ತುಂಬಾ ಸುಖದ ಬಣ್ಣ ಹುಡುಕುತ್ತೇನೆ, ಕೈಗೆಟಕುವುದು ದರ್ದಿನ ಕುಪ್ಪಿಗಳು. …
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ನಾನು ಹೀಗೆಯೇ

ನಾನು ಹೀಗೆಯೇ

ನಾನು ಹೀಗೆಯೇ ಬದುಕಿಹೋಗುತ್ತೇನೆ ಕಾಡು ಹೂವಂತೆ ಅನಾಮಿಕ ಗಾಳಿಯಂತೆ ಯಾವ ಗುರುತೂ ಉಳಿಸಿಕೊಳ್ಳದ …
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ಅವ ಬಂಡೆಕಲ್ಲಿನಂತೆ

ಅವ ಬಂಡೆಕಲ್ಲಿನಂತೆ

ಅವ ಬಂಡೆಕಲ್ಲಿನಂತೆ ಬದುಕಿದ್ದ ಅನ್ನುತ್ತಾನೊಬ್ಬ ಯಾವ ಮೊಳಕೆಯೂ ಚಿಗುರೊಡೆಯದ ಬಾಳ ಆಂಗಲದಲ್ಲಿ ಬಂಡೆಯಂತಾಗಿದ್ದ ನಿಜವಾಗಿ
-ಅವಿಜ್ಞಾನಿ

ಪೂರ್ತಿ ಕವನ ಓದಿ ›

#World_Poetry_Day

#World_Poetry_Day

ನನ್ನ ಸಂಜೆಗಳ ಕುರಿತು ಕೇಳಬೇಡ ಬಿಸಿಲು ಮೆತ್ತಿ ಮೆತ್ತಿ ಬಣ್ಣ ಮಾಸಿದ ಮುಖಕೆ ನೀರು ಪೂಸಿ …
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ಬದುಕಿಗೆ ರಂಗು

ಬದುಕಿಗೆ ರಂಗು

ಬದುಕಿಗೆ ರಂಗು ಮೆತ್ತುವ ಈ ಉಸಾಬರಿ ಶತಮಾನಗಳಿಂದ ನನ್ನ ಬೆನ್ನು ತೊರೆದಿಲ್ಲ ಇನ್ನೂ ರೂಪ ಬೇಕು ರೂಪ ಬೇಕು ಎನ್ನುವ ಸದ್ದಿಗೆ …
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ದಣಿದವನಿದ್ದ ಅವ

ದಣಿದವನಿದ್ದ ಅವ

ದಣಿದವನಿದ್ದ ಅವ ಅದೇನನ್ನೋ ಕಳೆದುಕೊಂಡವನಂತೆ ಹುಡುಕು ಹತ್ತಿಸಿಕೊಂಡ ಕಾಲುಗಳಲ್ಲಿ ವಿಶ್ರಾಂತಿಯ ವಿಳಾಸ ಮರೆತವನಂತೆ
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ನೀನು ಸಾವಧಾನಿಸು

ನೀನು ಸಾವಧಾನಿಸು

ನೀನು ಸಾವಧಾನಿಸು ಈ ಉರಿಯ ಉಜ್ಜಿಕೊಂಡ ರಾತ್ರಿಯಲ್ಲಿ ನನ್ನದೆಯ ನಂಜನ್ನು ಕೇಳುವ ನಿನ್ನ ತಾಳ್ಮೆಗೆ ಆಯಸ್ಸಿರಲಿ ನೂರು
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ಹನಿ 4

ಹನಿ 4

ಬದುಕು ಬಾಗಲು ಕಲಿಸಿತು ಬಾಗಿದೆ ಈಗ ಈ ಕಲೆ ಮಾಗಿದೆ..!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 5

ಹನಿ 5

ನಾ ಗಳಿಸಿಕೊಂಡಿದ್ದೆಲ್ಲ ಗಾಳಿಮಾತು ಬದುಕಿದ್ದಷ್ಟೇ ಕವಿತೆ.!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 6

ಹನಿ 6

ಬದುಕು ಮಗುವಿನ ಖುಷಿಯಾಗಲಿಲ್ಲ ಮುಪ್ಪಿನ ನಂಬುಗೆಯಾದರೂ ಆಗಿಹೋಗಲಿ..!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 12

ಹನಿ 12

ಬದುಕ ಬಗ್ಗೆ ರಮ್ಯವಾಗಿ ಬರೆದವ ತನ್ನ ನಿಜಾಯಿತಿಯ ದಾಖಲಾತಿ ಮಾಡಲಾಗದೇ ಮರಗುತ್ತಾನೆ.!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 15

ಹನಿ 15

ಬದುಕಿಗಾಗಿ ಬಾಗುತ್ತೇನೆ ಬಹಳವೇ ದಕ್ಕಿದ್ದು ಬೆನ್ನುಲುಬ ನೆಟ್ಟಿಗೆ ಮುರಿಯುವ ಸದ್ದಷ್ಟೇ.!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 33

ಹನಿ 33

ಬದುಕ ಬೆನ್ನೆಲುಬಿನಲ್ಲಿ ನೆಟ್ಟಿಗೆ ಮುರಿಯುವುದಷ್ಟೇ ಸದ್ದು.!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 37

ಹನಿ 37

ಅಸಲಿಯಾಗಿ ನಗಲಾಗದ ನಾನು ನಕಲಿಯಾಗಿ ಯಾರನ್ನೂ ನಗಿಸಿದ್ದಿಲ್ಲ ಬದುಕೇ ನೀ ಅದೆಷ್ಟು ಸೋಜಿಗ.!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 39

ಹನಿ 39

ಬದುಕ ಹಾಳೆ ಹರಿದವನಲ್ಲಿ ಬದಲಾಗುವ ತಾರೀಖಿನ ಕುರಿತು ಆವೇಶವಿಲ್ಲ.!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 45

ಹನಿ 45

ನೀವು ಕೇಳಬಹುದು ಬದುಕೆಷ್ಟು ಕಂಡೆ ನೀನು ಉಗುರ ಮೇಲೆ ನಿಂತು ಶ್ವಾಸಿಸಿಕೊಳ್ಳುವಷ್ಟೆಂದು ಹೇಳಬಲ್ಲೆ ಆಗ....!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

🤖 ಅವಿಜ್ಞಾನಿ AI