
#World_Poetry_Day
#World_Poetry_Day
ನನ್ನ ಸಂಜೆಗಳ ಕುರಿತು
ಕೇಳಬೇಡ
ಬಿಸಿಲು ಮೆತ್ತಿ ಮೆತ್ತಿ
ಬಣ್ಣ ಮಾಸಿದ
ಮುಖಕೆ ನೀರು
ಪೂಸಿ
ಒಡೆದ ಕಲ್ಲುಗಳ ಮೇಲೆ
ಭೂಮಿ ಭಾರ
ಹಾಕುವಂತೆ
ಕೂರಿ ಯಾವ
ಚಿಂತೆಯ ಬಗ್ಗೆ
ಚಿಂತಿಸಲಿಯೆಂಬ
ಗೊಂದಲಕ್ಕೀಡಾಗುತ್ತೇನೆ
ಗಲಿಬಿಲಿಯ ಜಮಾನವಿದು
ಖಾಲಿ ರಸ್ತೆ ತುಂಬಾ
ಧಾವಂತದ ನಡಿಗೆ
ಮತ್ತು
ಸಂತೆಯೊಳಗೆ
ಸ್ಮಶಾನ ಮೌನ
ಮತ್ತು ನಾನು
ಸುಟ್ಟ ಹೂವಿನ
ಎಸಳುಗಳಲ್ಲಿ
ದಿನಚರಿಯ ದಾಖಲಿಸುವವ
ಅಪರಾತ್ರಿಗಳ
ಭಯಗಳನ್ನೆಲ್ಲ
ಕೂಡಿಸಿ ನನ್ನದೆಂಬಂತೆ
ಘೋಷಿಸಿಕೊಳ್ಳಲಾಗದೆ
ಸಿಗ್ಗುನಾಗಬಲ್ಲೆ
ಕಡಲೂರಿಯ ಎದೆಗವಚಿಕೊಂಡು
ಹಿತ್ತಲ ಹೂವಿನ ಹಾಗೇ
ಕನಸಲಾರೆ
ಮತ್ತಿದು
ತೀರಾ ಸಾಮಾನ್ಯವಾಗುವ
ವಹಿವಾಟು
ಮಂಡಿಮೇಲೊಂದು
ಲೋಳಕಾರದ ಪ್ಯಾಂಟಿನ
ತೂತು
ತಳಕೈಯ ದೊಗರು
ಮಣ್ಣಿಗೆ ಸಾಕಷ್ಟೇ ಮುತ್ತಿಟ್ಟು
ಕೆಂದಾಗಿರುವ ಕೂದಲು
ತಿರುವಿಕೊಂಡು
ನಡೆವ ನನ್ನ ಸಂಜೆಗಳ
ಕುರಿತು ಕೇಳಬೇಡ
ಮತ್ತು ಪದ್ಯಗಳ ಕುರಿತೂ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments