
ಇಳಿದ ಕಂದೀಲ
ಇಳಿದ ಕಂದೀಲ
ಜೋಪಡಿಯಲ್ಲಿ
ಅಳುವ ಮಡಿಕೆ
ನಡೆಯದ ಗಡಿಯಾರಗಳಿವೆ
ರಜೆಯಲ್ಲಿ ಇಲ್ಲದ್ದೂ ಹಸಿವು
ಗೂಟದ ಲೈಟಿಗೆ
ಬಣ್ಣ ಕಟ್ಟಿದ್ದ ನಾನೂ
ಮುಂಡಿ ನೆಲ ಮುಟ್ಟಿದರೂ
ನನ್ನ ಬಾಗಿಲು ತೆರೆಯಲಿಲ್ಲ
ಯಾವ ಬಾವುಟಗಳು
ಕಿವಿ ಹರಿಯುವಷ್ಟು
ಕೂಗು ಕೇಳಿಸಿಕೊಳ್ಳುತ್ತೇನೆ
ಮತ್ತು
ನನ್ನ ನೆಲವನ್ನೇ ತಡಕಾಡಿ
ತಲುಪಬೇಕು ಈಗ
ಸಾಗರದ ದಾಹ ಈಗ
ಸಾವಿಗೆ
ನನ್ನ ಚಿತೆಯಲ್ಲಿ ನನ್ನವರ
ಸಹಿ ಇಲ್ಲ
ಉಸಿರು ನಿಲ್ಲುವುದಲ್ಲ
ಎದೆಕಣ್ಣು ಮಿನುಕದಿರಲೆಂದೇ
ಪ್ರಾರ್ಥಿಸುತ್ತೇನೆ
ಇಲ್ಲಿ
ಹೊಟ್ಟೆಯ ಗೂಡಿಗೆ
ಹೇಳಲು ನೂತನ
ಸುಳ್ಳುಗಳೆಲ್ಲ ನನ್ನಲ್ಲಿ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments