ಬಡತನ ಮತ್ತು ಹಸಿವಿನ ಕವನಗಳು Poems on Poverty and Hunger
ಬಡತನ ಮತ್ತು ಹಸಿವಿನ ಬಗ್ಗೆ ಬರೆದ ಕವನಗಳು. ಹಸಿವು, ಬಡತನ, ಬದುಕಿನ ಕಷ್ಟ.

ಮಳೆಬೆನ್ನಿನ ಚಾಪೆಯಲ್ಲಿ
ಮಳೆಬೆನ್ನಿನ ಚಾಪೆಯಲ್ಲಿ
ನಿದ್ದೆ ಹೊತ್ತ ಕತೆಗಳು
ಇಲ್ಲಿ ಕೇಳಿಸಬೇಡಿ
-ಅವಿಜ್ಞಾನಿ

ಇಳಿದ ಕಂದೀಲ
ಇಳಿದ ಕಂದೀಲ
ಜೋಪಡಿಯಲ್ಲಿ
ಅಳುವ ಮಡಿಕೆ
ನಡೆಯದ ಗಡಿಯಾರಗಳಿವೆ
ರಜೆಯಲ್ಲಿ ಇಲ್ಲದ್ದೂ ಹಸಿವು
-ಅವಿಜ್ಞಾನಿ


ನನ್ನ ನೋವು ನನ್ನದಲ್ಲ
ನನ್ನ ನೋವು ನನ್ನದಲ್ಲ
ಎಂದು ಕೊಂಡಾಕ್ಷಣ
ಬೊಗಸೆ ಕೈಯಾಗಿಸಿಬೇಡುವ
ಹರಿದ ಧಾವಣಿ ಟ್ರಾಫಿಕ್
ಹುಡುಗೀ
-ಅವಿಜ್ಞಾನಿ


ಹನಿ 23
ಪ್ರೀತಿ ಪ್ರೇಮ
ಕಾಮದ ಕುರಿತು
ರಮಣೀಯವಾಗಿ
ಬರೆಯಬಹುದಾಗಿತ್ತು
ಹಸಿವಿರದಿದ್ದರೆ.!
-ಅವಿಜ್ಞಾನಿ
