ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಮಳೆಬೆನ್ನಿನ ಚಾಪೆಯಲ್ಲಿ

ಮಳೆಬೆನ್ನಿನ ಚಾಪೆಯಲ್ಲಿ

ಮಳೆಬೆನ್ನಿನ ಚಾಪೆಯಲ್ಲಿ ನಿದ್ದೆ ಹೊತ್ತ ಕತೆಗಳು ಇಲ್ಲಿ ಕೇಳಿಸಬೇಡಿ ಬಿಸಿಲ ನೆತ್ತಿಯ ದೊರಗಿನಲ್ಲಿ ಪಾದ ತಿವಿದವ ನಾನು ಗೊರಕೆಯ ತುದಿಯ ಕನಸ ರೆಕ್ಕೆ ಬಿಚ್ಚಿಡಲೂಬೇಡಿರಿ ಇಲ್ಲಿ ಹಸಿವು ತಿಂದ ಕನಸುಗಳಷ್ಟೇ ಕೊಂಪೆಯಾಗಿರುವಾಗ ಮಣಿಮೂಡಿದ ನಗುವಿನಂಗಡಿಯ ಕಿತಾಬು ತೆರೆಯದಿರಿ ಕಣ್ಣೀರ ಒದ್ದೆಹಾಳೆಗಳೂ ಬಣಗುತವೆ ಚಳಿಯಲ್ಲಿ ಸಡಗರದ ಪೋಷಾಕು ಧರಿಸಗೊಡದಿರಿ ದುಮ್ಮಾನದ ಸರಕು ಒಯ್ಯುವ ಬೆತ್ತಲೆಯೆದೆಯ ಎದುರು ನೆಮ್ಮದಿಯ ರಂಗು ಜಿಮುಕಿ ಅಲುಗಾಡದಿರಲಿ ದುಃಖ ವಹಿವಾಟಿನ ಸಂತೆಯ ಮುಂದೆ ಗೆಲುವಿನ ಸುವಾರ್ತೆ ಡಂಗೂರ ಭಾರಿಸದಿರಿ ಸೋತಕದ ಮನೆಯ ಭಾವಣೆಯ ಮೇಲೆ ಯಾಕೆಂದರೆ ಬಿಸಿಲ ನೆತ್ತಿಯ ದೊರಗಿನಲ್ಲಿ ಪಾದ ತಿವಿದವ ನಾನು..!
-ಅವಿಜ್ಞಾನಿ
ಇನ್ನೂ ಓದಿ: ಇಳಿದ ಕಂದೀಲ · ಇಲ್ಲಿ ನೋವಿದೆ ಸಾವಿದೆ · ನನ್ನ ನೋವು ನನ್ನದಲ್ಲ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI