
ಗುನುಗುತ್ತೇನೆ ಯಾವುದೋ
ಗುನುಗುತ್ತೇನೆ ಯಾವುದೋ
ಹಾಡನ್ನು ಯಾವುದೇ ರಾಗವಿಲ್ಲದೇ
ಈ ಮೊದಲೂ ಇನ್ನಾರಿಗೋ ಇಷ್ಟದ ಹಾಡಾಗಿದ್ದಿರಬಹುದು ಅದು
ನೋವು ಪವಡಿಸಿ ಬರುವಾಗ
ಉಮ್ಮಳಿಕೆಗೆ ಕಾರಣ ಹೇಳಲಾಗುವುದಿಲ್ಲ
ಹಾಡು ಅಪ್ಟವಾಗಲು
ಬರಿಯ ಖುಷಿಯಷ್ಟೇಯಲ್ಲ
ತೊಟ್ಟು ಕಳಚಿದ
ಎಲೆಯ ಬೇನೆಯಷ್ಟಾದರೂ
ನೋವೂ ನಿಮಿತ್ತವಾಗಬಹುದು
ಈ ಸಂಜೆ ಯಾರಿಗೋ ಸಂತೋಷ ಕೋಡೋದಿರಬಹುದು
ಹುಟ್ಟಿದ ಪಾರ್ಟಿ ಹನಿಮೂನಿಗೆ
ಟೊಂಕಕಟ್ಟಿದ ಕಾಲುಗಳು
ಬೆಟ್ ಮ್ಯಾಚಲ್ಲಿ ಗದ್ದು ಕುಪ್ಪಳಿಸೋ
ಬಿಸಿ ಟೀಶರ್ಟ್ಗಳು
ಈ ಗೋಡೆಯ ಒಳಗೆ
ಬಿಸಿಯದೆಯ ಮೇಲೆ
ಉಕ್ಕಿ ಬರುವ
ನೋವ ಲೆಕ್ಕ ಮಾತ್ರ ಹಾಕಬಲ್ಲೆ ನಾ
ಬೆಳಕ ಹೊದ್ದ ಮಿಂಚುಹುಳ
ಲೋಕ ಬೆಳಗುವ
ಧಾವಂತಕ್ಕೆ ಕಡದ
ಬೆಳಕ ಚಂದ್ರ ಕೇಕೆ
ಹಾಕುತ್ತಾನೆ
ಹಾಗೆಲ್ಲಾ...
ಗುನುಗುತ್ತೇನೆ
ಅದ್ಯಾವುದೋ
ಹಾಡನ್ನು ರಾಗದಾಚೆಗೆ
ಇಣುಕಿಸಿ ಅಣುಕಿಸುತ್ತಾ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments