
ಹೃದಯ ಮಾತನಾಡುತ್ತದೆ
ಶ್!....
ಹೃದಯ ಮಾತನಾಡುತ್ತದೆ
ಯಾವಾಗ ಮೆದುಳ ಕಿವಿಗಳು
ಮುಚ್ಚಿರುತ್ತದೋ ಅವಾಗೆಲ್ಲ
ಹೃದಯಕ್ಕೆ ನಾಲಿಗೆ
ಕೊಟ್ಟಿದ್ದರೂ
ಕೇಳಬೇಕಾದ ಮಾತು
ಕೇಳಲೇಬಾರದಪ್ಪಿನ
ದೊಡ್ಡ ದೊಡ್ಡ ಕಿವಿಗಳು
ಮೆದುಳ ಬಳ್ಳಿಯಲ್ಲಿ
ಅಡರಿಕೊಂಡಿವೆ
ಹೃದಯ
ಮಾತನಾಡುತ್ತಲೇ ಇತ್ತು
ಯಾವಾಗೆಲ್ಲ ನಾ
ಕವಿಯಗಲಿಸಿದ್ದೇನೋ ಅವಾಗೆಲ್ಲ
ಹೃದಯಕ್ಕೆ ಗೊತ್ತಿಲ್ಲ ಮೆದುಳಿನ
ಕಿವಿಗಳ ಬಗ್ಗೆ
ಮೆದುಳಿನ್ನೂ ನೋಡಿಲ್ಲ
ಹೃದಯದ ನಾಲಿಗೆ ಕಡೆಗೆ
ಈ ಹಾಳಾದ ಹೃದಯ
ಬೈಯುತ್ತದೆ
ಮೆದುಳು ಮಾತನಾಡುತ್ತಿರುವಾಗ
ಈ ದರವೇಸಿ ಮೆದುಳು
ಮರಗುತ್ತದೆ
ನಿಷ್ಕಾಪಿ ಹೃದಯ ಕಿವಿಮುಚ್ಚಿಟ್ಟಾಗ
ಮೆದುಳಿನ ಕಿವಿಗೆ ಕಾದಕಬ್ಬಿಣವನ್ನೇ
ತುರುಕಿಟ್ಟಿದ್ದೇವೆ
ಹೃದಯದ ನಾಲಿಗೆ ಚಲಿಸಿತ್ತಾದರೂ
ಹೇಗೆ?
ಯಾರದರೂ ಕೇಳಿಸಿಯಾರು
ಹೃದಯಕ್ಕೆ ಭಯವಿದೆ
ಎಲ್ಲ ಕೇಳಿಸಿಕೊಳ್ಳಬೇಕು
ಮೆದುಳಿಗೆ ಹುಂಬವಿದೆ
ನಾಲಿಗೆಯ ನರಳಾಟವೊಂದ
ಹೊರತು ಮೆದುಳಕಿವಿ
ಎಲ್ಲವನ್ನೂ ಕೇಳುತ್ತದೆ
ಬಹಳವಾಗಿ
ಆದರೂ....
ನಾಲಿಗೆ ಮಾತಾಡಬೇಕು
ಕಿವಿ ಮುಚ್ಚಿದಿದ್ಯಾಗ
ಹೃದಯದ ಬಡಿತ
ಬಡಿಯಬೇಕು ಮೆದುಳಿಗೆ
ನಾವು ಆಗುವುದೇ ಆಗ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments