ತತ್ವ ಕವನಗಳು Philosophical Poems
ತತ್ವದ ಬಗ್ಗೆ ಬರೆದ ಕವನಗಳು. ಜೀವನ, ಜಗತ್ತು, ಮನುಷ್ಯ — ಕವಿಯ ಚಿಂತನೆ.


ಒಂದು ದಿವ್ಯ ಮೌನ
ಒಂದು ದಿವ್ಯ ಮೌನ
ಸೂತಕದ ಆಚೆಗಿನಂತೆ
ಆವರಿಸಿಕೊಂಡರೆ
ಸಾವಧಾನವಾಗಿ
ಏನನ್ನು ತರ್ಕಿಸಬಹುದು
-ಅವಿಜ್ಞಾನಿ

ಹೇಳಿದ್ದು ಕೇಳಿದ್ದೇನೆ
ಹೇಳಿದ್ದು ಕೇಳಿದ್ದೇನೆ
ಅವರು
'ಸಮಯ'
ಗಾಯವನ್ನು
ಗುಣಪಡಿಸುತ್ತದೆ
ಯೆಂದು
…
-ಅವಿಜ್ಞಾನಿ

ನನ್ನನ್ನು ಕ್ಷಮಿಸಿ
ನನ್ನನ್ನು ಕ್ಷಮಿಸಿ
ಕ್ಷಮಿಸಿ ನಿಮ್ಮ ಅಂತರಾಳದಿಂದ
ನಾಭಿ ಸೀಳಿದ ಕರುಣಾಜನಕತೆಯೊಂದು
ನಿಮ್ಮಲ್ಲಿ ನನ್ನ ಕುರಿತಾಗಿ
ಇದ್ದರೆ
ಬೇಷರತ್ ಕ್ಷಮೆ ಕೇಳುತ್ತೇನೆ
-ಅವಿಜ್ಞಾನಿ

ಎಲ್ಲಾ ಬೀದಿ
ಎಲ್ಲಾ ಬೀದಿ
ದೀಪಗಳೂ ಆರಿಯೇ ಇರಲಿ
ಬೆಳಕಲ್ಲಿದೆ ಉರಿಯುತ್ತಿದ್ದರೂ
ಇದೆಯೆನ್ನುವ ಭ್ರಮೆಯ
ಬಿಟ್ಟು?
-ಅವಿಜ್ಞಾನಿ

ಹನಿ 9
ದಲ್ಲಾಳಿತನದ
ಜಗತ್ತಿದು
'ಫಕೀರಾ,
ನಿನ್ನ ಕಫನ್ ಕೂಡ
ಲಾಭದ ಲೆಕ್ಕಾಚಾರಕ್ಕೆ
ಬಟವಾಡೆಯಾಗುತ್ತದೆ.!
-ಅವಿಜ್ಞಾನಿ

ಹನಿ 14
ನೀ ನೀನಾಗಿಯೇ ಇರು
'ಅವಿ,
ಇಲ್ಲಿಯವರಿಗೆ
ಸಂತನಾಗುವಷ್ಟು ಹಪಾಹಪಿ
ಮನುಷ್ಯನಾಗಲು ಇಲ್ಲ.!
-ಅವಿಜ್ಞಾನಿ

ಹನಿ 27
ನಿನ್ನ ಸನ್ಮಾನಗಳ
ಬೆಂಕಿ ನನ್ನ ಸುಡದಿರಲಿ
ನಾನು ಬಿಟ್ಟು
ಬಯಲ ಹಿಡಿದಿದ್ದೇನೆ
ಬೆತ್ತಲಾಗಿ
ಬಾ ಇಲ್ಲಿ ವಿರಮಿಸು
ನಾನಿಲ್ಲದ ಜಗತ್ತು
ಅದೆಷ್ಟು ರಮ್ಯ.!
-ಅವಿಜ್ಞಾನಿ

ಹನಿ 28
ಆಟಿಕೆಗಳಿದ್ದವು
ನಿನ್ನವೇ ಬಹಳಷ್ಟು
ಖುದಾ
ನನ್ನ ಬದುಕಲ್ಲಿ
ಆಡುವುದರಲ್ಲೇನು
ಉತ್ಸುಕತೆ..!
-ಅವಿಜ್ಞಾನಿ

ಹನಿ 36
ಯಾವ ಕೈಗಳಿಲ್ಲ
ತಳಹದಿಯ
ಮೇಲೆತ್ತಲು
'ಅವಿ,
ಇಲ್ಲಿ
ಕೈ ಬೀಸುವುದನ್ನೇ
ರೂಢಿಸಿಕೊಂಡವರಿದ್ದಾರೆ.!
-ಅವಿಜ್ಞಾನಿ
