ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಎಲ್ಲಾ ಬೀದಿ

ಎಲ್ಲಾ ಬೀದಿ

ಎಲ್ಲಾ ಬೀದಿ ದೀಪಗಳೂ ಆರಿಯೇ ಇರಲಿ ಬೆಳಕಲ್ಲಿದೆ ಉರಿಯುತ್ತಿದ್ದರೂ ಇದೆಯೆನ್ನುವ ಭ್ರಮೆಯ ಬಿಟ್ಟು? ಎಲೆ ಎಲ್ಲಾ ಉದುರಿ ಮರ ಬೋಳಾಗಿಯೇ ಇರಲಿ ಚದುರದೇ ಇದ್ದರೂ ಹಸಿರಲ್ಲಿದೆ ಇದೆಯೆನ್ನುವ ಭ್ರಮೆಯ ಬಿಟ್ಟು ಯಾವ ಗಾಳಿಯೂ ಬೀಸದೆಯೇ ಇರಲಿ ಸುಯ್ಯನೆ ರಾಚಿದರೂ ತಂಪಲ್ಲಿದೆ ಇದೆಯೆನ್ನುವ ಭ್ರಮೆಯ ಬಿಟ್ಟು ಮೋಡಗಳೆಲ್ಲ ಚದುರಿಯೇ ಹೋಗಲಿ ಸುರಿಯದೇ ಮಳೆಯಾಗಿ ಬಿದ್ದರೂ ಮಳೆ ಎಲ್ಲಿದೆ ಹನಿ ಎನ್ನುವ ಭ್ರಮೆಯ ಬಿಟ್ಟು ಎಲ್ಲಾ ರೂಪವೂ ಕುರೂಪ ಎಂದೆನಿಸಲಿ ಸುಂದರ ಎಂದರೂ ಸೌಂದರ್ಯ ಎಲ್ಲಿದೆ ಇದೆಯೆನ್ನುವ ಭ್ರಮೆಯ ಬಿಟ್ಟು ಯಾವ ಪ್ರೇಮವೂ ದಕ್ಕದೇ ಹೋಗಿಬಿಡಲಿ ಸಿಕ್ಕಿದರೂ ಒಲವೆಲ್ಲಿದೆ ಪ್ರೀತಿ ಎನ್ನುವ ಭ್ರಮೆಯ ಬಿಟ್ಟು ಎಲ್ಲಾ ದಿನ ಹೀಗೆಯೇ ಸವೆದು ಹೋಗಲಿ ಜೀವಂತ ಎಂದೆನಿಸಿ ಬದುಕಲ್ಲಿದೆ ಇದೆಯೆನ್ನುವ ಭ್ರಮೆಯನ್ನು ಬಿಟ್ಟು?
-ಅವಿಜ್ಞಾನಿ
ಇನ್ನೂ ಓದಿ: ಹೃದಯ ಮಾತನಾಡುತ್ತದೆ · ಒಂದು ದಿವ್ಯ ಮೌನ · ಹೇಳಿದ್ದು ಕೇಳಿದ್ದೇನೆ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI