ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಒಂದು ದಿವ್ಯ ಮೌನ

ಒಂದು ದಿವ್ಯ ಮೌನ

ಒಂದು ದಿವ್ಯ ಮೌನ ಸೂತಕದ ಆಚೆಗಿನಂತೆ ಆವರಿಸಿಕೊಂಡರೆ ಸಾವಧಾನವಾಗಿ ಏನನ್ನು ತರ್ಕಿಸಬಹುದು ಮಹಡಿಗಳಂತೆ ಕಟ್ಟಿರುವ ನಂಬಿಕೆಯ ನೂಲು ಶಿಥಿಲಗೊಳ್ಳುವುದರದ್ದೋ ಹಗ್ಗ ಹರಿದು ಬಿಟ್ಟ ಕನಸಿನ ಗಾಳಿಪಟಗಳ ಪಟ್ಟಿಯದ್ದೋ ಈ ಮಳೆ ಚಳಿ ಋತುವಿನ ವಿಪರೀತ ಮೋಜಿಗೂ ಉಲ್ಲಾಸವಾಗದ ಸಂಜೆಗಳಲ್ಲ ಯಾವ ತಾಜಾ ಉಪಾಸವಿಲ್ಲದೇ ಕಳೆದು ಹೋಗುವಾಗ ಕೆನೆಕಟ್ಟಿದ ಕಣ್ಣುಪಾಪೆಯ ಗಾಢತೆಯೂ ಕಥೆಗಳನ್ನ ಹೇಳ ಬಯಸುತ್ತದೆ ಚಿಂದಿಗೋಡಿದ ದಿನಗಳ ಒಟ್ಟು ಮೊತ್ತ ಕಳೆಬರಹ ಹೊಸ ಹೊಸ ರೂಪ ತಾಳತೊಡುತ್ತದೆ ಚಿಂತಿತಗೊಳ್ಳಲು ಬಹುವಾದ ಕಾರಣಗಳಾಗ ಬಹುದು ಕಾಲದ ಕುಡುಗೋಲಿನ ಸದ್ದು ಹೊಸದಾಗಿ ಪ್ರತಿಬಾರಿ ಗುದ್ದುತ್ತವೆ ಈಗ ಫಕತ್ ಒದೆ ಮಾಮೂಲಿ ಎಂಬಂತಿನ ವಾಡಿಕೆ ಆದರೂ.. ಚರಮಗೀತೆಯಂತೆ ಅವಸಾನವಾಗಬಲ್ಲ ಆ ದಿವ್ಯ ಮೌನ ಪವಿತ್ರವಾಗಿಯೇ ಉಳಿಯಬಹುದಿತ್ತು ತರ್ಕವೂ ಯಾವ ರಾಗವನ್ನೂ ನುಡಿಸದ ಹೊತ್ತಿನಲ್ಲಿ..!
-ಅವಿಜ್ಞಾನಿ
ಇನ್ನೂ ಓದಿ: ಹೃದಯ ಮಾತನಾಡುತ್ತದೆ · ಹೇಳಿದ್ದು ಕೇಳಿದ್ದೇನೆ · ನನ್ನನ್ನು ಕ್ಷಮಿಸಿ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI