ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಯಾರದೋ ನೋವಿಗೆ

ಯಾರದೋ ನೋವಿಗೆ

ಯಾರದೋ ನೋವಿಗೆ ಇನ್ನಾರದೋ ಹಾಡಿಗೆ ನನ್ನದೂ ಸೇರಿಸಿ ಲೆಕ್ಕಿಸಿಕೊಳ್ಳುತ್ತಿದ್ದೇನೆ ನಾನೇನು ಭಿನ್ನವಾಗಿ ದುಃಖಿಸುತ್ತಿದ್ದೇನೆಯೇ.!? ಎಲ್ಲಾ ಮನೆಯ ಕಿಟಕಿಯಲ್ಲೂ ತುಮುಲದ ಗಾಳಿ ಸೂಸುವುದಂಟು ಕೆಲವು ಚಿಲಕ ತೆರೆದು ಒಂದಿಷ್ಟು ಕದ ಮುಚ್ಚಿ ನಾನೇನು ಬಹುವಾಗಿ ಉಸಿರುಗಟ್ಟಿಸಿಕೊಳ್ಳುತ್ತಿದ್ದೇನೆಯೇ.? ಹೆಜ್ಜೆಗೂ ಹೊಂದವ ಹೊದ್ದ ರಸ್ತೆಗಳಂಟು ಬಹುಪಾಲು ಕತ್ತಲೆಯಲ್ಲ ಒಂದಿಷ್ಟು ಬೆಳಕ ಬಟ್ಟೆಯಲ್ಲ ನಾನಷ್ಟೇ ಎಡವಿ ನಡೆಯುತ್ತಿದ್ದೇನೆಯೇ? ಎಲ್ಲೆಲ್ಲಿಯೂ ತೇಪೆಗೆ ಜನಸಂದಣಿಯುಂಟು ಕೆಲವು ಮುರಿಸಲ್ಪಟ್ಟದ್ದು ಇನ್ನೊಂದಿಷ್ಟು ಮುರಿತಕ್ಕೊಳಗಾಗಿದ್ದು ನಾನಷ್ಟೇ ಗಾಯ ಕೆರೆದು ವ್ರಣಗೊಳಿಸುತ್ತಿದೇನೆಯೇ. ವಸ್ತುತಾ... ಇನ್ನಾರದ್ದೋ ಹಾಡಿನಲ್ಲಿ ನೋವಿನಲ್ಲಿ ನನ್ನ ಕಂಡುಕೊಳ್ಳುತ್ತೇನೆ ಅದಷ್ಟನ್ನೂ ನಾ ಬದುಕುವ ಕಾರಣದಿಂದ..!
-ಅವಿಜ್ಞಾನಿ
ಇನ್ನೂ ಓದಿ: ಗುನುಗುತ್ತೇನೆ ಯಾವುದೋ · ಒಂದು ಹರಿತವಾದ ಬೇನೆ · ನಾ ಬೊಗಸೆಯಾಗುತ್ತೇನೆ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI