ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಮತ್ತೆ ನಾನು

ಮತ್ತೆ ನಾನು

ಮತ್ತೆ ನಾನು ನನಗೆ ಸಿಗುವಾಗ ಯಾವ ಸಮಾಧಾನವಿದೆ ನನ್ನಲ್ಲಿ ಸಹಜವಾಗಿ ಹೇಳಲು? ಬದುಕ ಹುಡುಕುತ್ತಾ ಅಲೆದ ದಿನಮಾನಗಳು ಸೂಜಿಗಲ್ಲಿನಂತೆ ಚುಚ್ಚಿದ್ದಷ್ಟೇ ನೆನಪಿಟ್ಟುಕೊಳ್ಳುತ್ತದೆ ನಾನದರೋ ಷಹರದ ಮಹಡಿಯಲ್ಲಿ ಗೂಡು ಮರೆತ ಪಾರಿವಾಳ ನೆಲೆಯ ದಿಕ್ಕನ್ನೂ ಮರೆತ ದಿಕ್ಕೂಚಿ ನನ್ನಲ್ಲಿನ ನಿಜಾಯಿತಿ ಇರಿದ ಕಥೆಗಳಷ್ಟೇ ಬಾಯಿ ಸಿಹಿಮಾಡಿಕೊಳ್ಳುವ ಸಬೂಬುಗಳು ಹಾಳೆ ಹರಿದ ಪುಸ್ತಕ ನೋವ ಗಂಧ ಮೆತ್ತಿಕೊಂಡ ನೊಗ ಇನ್ಯಾವ ಸುವಾಸನೆಯನ್ನೂ ಘಮಿಸುವುದಿಲ್ಲ ಮತ್ತು ಇದು ವಿರಳವಾಗಿರಬಹುದಾದ ಸಮಾಚಾರ ನನಗನಿಸುವಂತೆ ಮತ್ತೀಗ ತೊರೆದುಹೋದ ನನಗೆ ನಾನು ಸಿಕ್ಕುವ ಸಮಯ ಭಯವನ್ನಷ್ಟೇ ಉಳಿಸಿಕೊಂಡಿದೆ..!
-ಅವಿಜ್ಞಾನಿ
ಇನ್ನೂ ಓದಿ: ಯಾರೂ ಸುಳಿಯದ · ಈ ಗಿಜಿಗುಡುವ ಷಹರದ · ಯಾವ ನೋವಿಗೂ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI