ಒಂಟಿತನದ ಕವನಗಳು Poems on Loneliness
ಒಂಟಿತನದ ಬಗ್ಗೆ ಬರೆದ ಕವನಗಳು. ಒಂಟಿ ನಡಿಗೆ, ಒಂಟಿ ಬದುಕು, ಒಂಟಿ ಕನಸು.

ಯಾರೂ ಸುಳಿಯದ
ಯಾರೂ ಸುಳಿಯದ
ಒಂಟಿತನಕ್ಕೆ ಜೋತು ಬೀಳುತ್ತೇನೆ
ಎದೆಬಿರಿದ ಸದ್ದು
ಎಲ್ಲೂ ಕೇಳಿಸಿದರಲಿಯೆಂದು
ನಯನಾಜೂಕು ಮುಡಿಗೇರಿಸಿಕೊಂಡ
ಈ ದುನಿಯಾದಲ್ಲಿ
…
-ಅವಿಜ್ಞಾನಿ


ಈ ಗಿಜಿಗುಡುವ ಷಹರದ
ಈ ಗಿಜಿಗುಡುವ ಷಹರದ
ಮೂಲೆಯಲ್ಲಿ ಏಕಾಂತವನ್ನು
ಧೇನಿಸುವ ನನ್ನ ಬಗ್ಗೆ ಯಾವೊಂದು
ಪದ ಕವಿತೆ ಕಾವ್ಯ ದೊರಕದು
ನಿಮಗೆ
-ಅವಿಜ್ಞಾನಿ

ಯಾವ ನೋವಿಗೂ
ಯಾವ ನೋವಿಗೂ
ತೆಕ್ಕೆಗಳಿಲ್ಲ ನಾಜೂಕತನದ
ಲೋಕದಲ್ಲಿ ಮುಸಾಫಿರ
ಅಲೆಮಾರಿ ಪಾದಕ್ಕೆ
ಗೂಟ ಹೊಡೆಯುವ
ನೆಪವುಳಿಸಿಯಾದರೂ ನಡೆದು
…
-ಅವಿಜ್ಞಾನಿ


ಹನಿ 43
ಉಳಿಯುತ್ತವೆ ದಾರಿ
ಮುಗಿದ ಮೇಲೂ
ನನ್ನ ನಡಿಗೆ
ಹೆಜ್ಜೆಗಿಲ್ಲಿ ತಕರಾರಿಲ್ಲ
ಗುರಿಯ ಬಗೆಗೆ..!
-ಅವಿಜ್ಞಾನಿ
