
ಹೇಳಿದ್ದು ಕೇಳಿದ್ದೇನೆ
ಹೇಳಿದ್ದು ಕೇಳಿದ್ದೇನೆ
ಅವರು
'ಸಮಯ'
ಗಾಯವನ್ನು
ಗುಣಪಡಿಸುತ್ತದೆ
ಯೆಂದು
ಅದೊಂದು ನಂಬಬಯಸುವ
ಸುಳ್ಳು
ಗಾಯದ ನಂಜು
ಏರಿಸಿದ್ದೇ ಮಿಕ್ಕಿದೆ
ಸಮಯ
ಯಾವ ಹಕೀಮನೂ
ಆಗಿದ್ದಿಲ್ಲ
ವ್ರಣಗೊಂಡ
ಬರೆಯ ಬಳೆ
ಕೈ ತೊಡಿಸಿಕೊಂಡ
ನನಗೆ
ಕಾದಷ್ಟೂ ಕೇಳಿದ್ದು
ಬಳೆ ಹೊಡೆದ ಸದ್ದು
'ಸಮಯ'
ಜೋಡಿಸುವುದಲ್ಲ
ಬೇರ್ಪಡಿಸುವುದಷ್ಟೇ
ಸೈತಾನನಾಗಬಲ್ಲದು
ಯುದ್ಧ
ಸಮಯ ಅಥವಾ
ನೋವಿನೊಂದಿಗಾಗಿದ್ದೂ
ಸೈನಿಕ ಗಾಯಾಳು
ಆಗಿದ್ದರೆ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments