ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ದಣಿದವನಿದ್ದ ಅವ

ದಣಿದವನಿದ್ದ ಅವ

ದಣಿದವನಿದ್ದ ಅವ ಅದೇನನ್ನೋ ಕಳೆದುಕೊಂಡವನಂತೆ ಹುಡುಕು ಹತ್ತಿಸಿಕೊಂಡ ಕಾಲುಗಳಲ್ಲಿ ವಿಶ್ರಾಂತಿಯ ವಿಳಾಸ ಮರೆತವನಂತೆ ಹಸಿವು ನಿದ್ದೆ ಆರಾಮದ ಬಟ್ಟೆಯುಟ್ಟುಕೊಂಡರೂ ಹುಡುಕುತ್ತಿದ್ದ ಅದೇನನ್ನೋ ಕೊಡೆ ಹಿಡಿದೂ ನೆನೆದವನಂತೆ ಮಂದಿರ ಚರ್ಚ್ ಮಸೀದಿಯೊಳಗೂ ಪಾರ್ಕ್ ಬೀಚ್ ಸಾರ್ವಜನಿಕ ಶೌಚಾಲಯದೊಳಗೂ ಹುಡುಕಿಗೂ ಬೇಡವಾಗುವಷ್ಟು ಪ್ರೀತಿ ಪ್ರೇಮ ಕಾಮ ಶೋಕ ಕೊನೆಗೆ ಸಾವು ಎದುರಿಗಿಟ್ಟರೂ ಮತ್ತೂ ಹುಡುಕುತ್ತಿದ್ದ ಸಿಕ್ಕಿದ್ದು ಒಪ್ಪುತ್ತಿರಲಿಲ್ಲ ಒಪ್ಪಿದ್ದು ದಕ್ಕುತ್ತಿರಲಿಲ್ಲ ಇವನನ್ನು ಕಂಡರೆ ಮುಸಿನಗದಿರಿ ಗಳಿಸಿಕೊಂಡ ತೃಪ್ತಿಯಲ್ಲ ಕಳೆದುಕೊಂಡಿರುವೆ ಎಂಬ ಬೇಸರವನ್ನೇ ಬದುಕುವವ ಅವ..!
-ಅವಿಜ್ಞಾನಿ
ಇನ್ನೂ ಓದಿ: ಬದುಕಿಗೆ ರಂಗು · ನಾನು ಹೀಗೆಯೇ · ಅವ ಬಂಡೆಕಲ್ಲಿನಂತೆ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI