ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಇದು ಮೊದಲೇನಲ್ಲ

ಇದು ಮೊದಲೇನಲ್ಲ

ಇದು ಮೊದಲೇನಲ್ಲ ತಿಳಿದಿದ್ದೇನೆ ಕೊನೆಯೂ ಆಗಲಾರದು ನಿಗಿ ಕೆಂಡವ ಕೆನ್ನೆಗೆ ಸವರಿ ಬೆಳಕ ಬೆರಳನ್ನು ಹುಡುಕುವ ನನ್ನ ನಿರಂತರತೆ ಬಾಗಿಲಲ್ಲ ಕದದ ತಲಾಶೆ ಆತಂಕವಾದದ್ದು ಮತ್ತು ಬಯಲ ಬಟ್ಟೆಯಲ್ಲಿ ನನ್ನ ಸುಟ್ಟುಕೊಂಡ ಕಲೆ ಮರೆಸಿದಂತೆ ತೆರೆದಿರುವ ಬೆತ್ತಲೆ ಆಕಾಶ ಈ ಮುಳ್ಳಿನ ತುದಿ ಚೂಪೇ ನಿಸ್ಸಂಶಯ ನಂಬಿಕೆ ತುಣುಕಲ್ಲಷ್ಟೇ ಒರತೆ ಬತ್ತಿಸುವ ಭರವಸೆ ಕನಸ ಚೀಲವೇಕೆ ಬದುಕ ಹೊದಿಕೆಯೇ ಹರಿದು ಹೋಗುವಾಗ ಮಳೆ ತಡೆಯುವ ಹುನ್ನಾರಕ್ಕೆ ನೀವು ನಗಬಹುದು ಬಹುಷಃ ಹೀಗೂ ಬಿಸಿಯ ಬರಡುತನಕ್ಕೆ ನನ್ನ ಕಾಯುವಿಕೆ ಮೊದಲೇನಲ್ಲ ಕೊನೆಯೂ ಆಗಲಾರದೆಂದು ತಿಳಿದಿದ್ದೇನೆ..!
-ಅವಿಜ್ಞಾನಿ
ಇನ್ನೂ ಓದಿ: ಕನಸು ಸಿಕ್ಕಲಾರೆ · ಹನಿ 25 · ಹನಿ 35
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI