ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ನಿನ್ನ ರಾತ್ರಿ

ನಿನ್ನ ರಾತ್ರಿ

ನಿನ್ನ ರಾತ್ರಿ ನಿನಗೆ ಭಯ ಆಗುವ ಕಂಪನವನ್ನು ಬದುಕಿದ್ದೀಯಾ? ಮಳೆ ಗಾಳಿಗೂ ಮೈಯೊಡ್ಡಿ ಬಿಸಿಲಿಗೆ ಕೊಡೆಯಾಗಿದ್ದ ಮನೆಯ ಚಾದರ ಒಂದು ನಿದ್ದೆ ಹೊತ್ತಿನಲ್ಲಿ ಬೂದಿಯ ಕಣವಾಗಿದ್ದು ನನ್ನ ರಾತ್ರಿಯ ಭಯ ಹುಣ್ಣಿಮೆ ಅಮಾವಾಸ್ಯೆ ನಕ್ಷತ್ರ ವಾಸ್ತು ನೋಡದೆ ತನ್ನದೇ ರಾಗದಲ್ಲಿ ಹಾಡುತ್ತಿದ್ದ ಬೀದಿ ನಾಯಿಯ ಸ್ವರ ಒಂದು ರಾತ್ರಿಯಿಂದ ಕೇಳಿಸುತ್ತಿಲ್ಲ ಬೂದಿಯಲ್ಲಿ ಮಿಂದ ಎರಡು ಎಲುಬು ಸಿಕ್ಕಿತ್ತು ಬೆಳಿಗ್ಗೆ ಯಾವ ಅಗ್ರಿಮೆಂಟೂ ಇಲ್ಲದೇ ಟೊಂಗೆ ಪೋಟರೆಯಲ್ಲಿ ಗೃಹಪ್ರವೇಶ ಮಾಡಿಕೊಂಡಿದ್ದ ಹಕ್ಕಿಪಿಕ್ಕಿಗಳ ರೆಕ್ಕೆ ಮತ್ತು ಬೆಂಕಿಯಲ್ಲಿ ಬೆಂದ ಮರದ ಎಲೆಗಳೂ ಸಿಕ್ಕಿದ್ದವು ನನಗೆ ಬೂದಿಯಲ್ಲಿ ಸಾಮಾನ್ಯವಾಗಿ ಗನ್ನು ಬಾಂಬಿನ ಆಟದಲ್ಲಿ ಕನಸು ಹೊದ್ದ ಕಣ್ಣುಗಳು ಹೊರೆ ಇರುವ ಬೆನ್ನು ಮೂಳೆಗಳು ನೆಲಕ್ಕಿನ್ನೂ ಕಾಲು ಕುತ್ತದ ಮನುಷ್ಯ ತಲೆಗಳೇ ಮೈದಾನ ಕಸಾರೆಯಲ್ಲಿ ಕುಳಿತು ಇದನ್ನು ಯುದ್ಧವೆನ್ನುತ್ತಾರೆ ಸೂಟುಬೂಟಿನ ಜನ ಹೆಣಗಳ ಎಣಿಕೆ ಸರಿದೋಗಿದ ಮೇಲೆ ಸಮಾಧಾನದ ಪಾರಿವಾಳ ಹಾರಿಸುತ್ತಾರೆ ಅದೇ ಬೂದಿಯಲ್ಲಿ ಹಕ್ಕಿದನ್ನು ನಾನಿನ್ನೂ ಈ ಪದ್ಯ ಪೂರ್ತಿಗೊಳಿಸಲು ನನ್ನೊಂದು ಬೆರಳ ಹುಡುಕುತ್ತಿದ್ದೇನೆ ಬೂದಿಯ ಮಧ್ಯದಲ್ಲಿ ನನ್ನದೇ ರಾತ್ರಿಯ ಭಯದಲ್ಲಿ..!
-ಅವಿಜ್ಞಾನಿ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI