
ನೀನೊಂದು ದಕ್ಕಲಾರದ
ನೀನೊಂದು ದಕ್ಕಲಾರದ
ಕವಿತೆ
ಆದರೂ ಬರೆಯುವ ಪಣ
ತೊಡುತ್ತೇನೆ
ಪದಗಳೆಲ್ಲ ಗೋಜಲಾಗಿದೆಯಾ?
'ಕೇಳು,
ನಿನ್ನನ್ನಷ್ಟೇ ಕನಸಿದ್ದೇನೆ
ಈವರೆಗೆ
ನಿನ್ನ ನಗು ಕಲ್ಪನೆ
ನಾಚಿಕೆ ಬಿಂಕ
ಪಾಸ್ವರ್ಡ್ ಅಥವಾ
ನಿನ್ನಿಷ್ಟದ ಟೀ ಶರ್ಟ್
ನಾನಾಗಿರಬಹುದು ಬಹುಷಃ
ನಿನ್ನವನೆಂಬ ಷರಾ
ಬರೆಯಲಾರದ ಕೊರತೆಯೊಂದಿದೆ
ಪರದೆಗಳ ಗೊಡವೆ
ಕೆಡವಿದ ದಿನ
ಆ ಮೊಹರು ಒತ್ತಿಬಿಡಬಹುದು
ನಾ ಬದುಕಿನ ಅಪವಾದ
ಆದರೂ ಬದುಕುತ್ತೇನೆ
ನಿನ್ನೆಯಂತೆಯೇ ಇಂದನ್ನೂ
ನಿನ್ನ ಕತ್ತಲ ಸೋಲ್ಲಿನ
ಹೆಕ್ಕುವ ಹುಕಿಗೆ
ನಾಳೆಯನ್ನಾದರೂ
ಗಳಿಸಿಬಿಡಬಲ್ಲೆನೆಂಬ
ಹುಂಬದಿಂದ
ನನ್ನ ಇಬಾದತ್ತಿನಲ್ಲೂ
ನೀ ಸಿಗಬೇಕೆನ್ನುವ
ಅಹವಾಲಿದೆ
'ಖುದಾ,
ಕ್ಷಣಿಕವಾಗಿಯಾದರೂ
ನೋಡಬಹುದೆನ್ನುವ
ಇರಾದೆಗೆ
ನನ್ನ ನಂತರವೂ
ನಿನ್ನ ಬೇಕೆನ್ನುವ
ಈ ಪವಿತ್ರ ಪ್ರಾರ್ಥನೆಗೆ
ಒಳಿತನ್ನುವ ಬೊಗಸೆಗಳಷ್ಟಾದರೂ
ಸಿಕ್ಕಿಬಿಡಲಿ
'ಹೂರಿ,
ನಿನ್ನ ಎದುಕ್ಕೊಳ್ಳುವುದಕ್ಕೆ
ಜನ್ನತ್ತಿನ ಘಮವಿದೆ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments