
ಅವನ ಪ್ರೀತಿ
ಅವನನ್ನು ತುಂಬಾ
ಪ್ರೀತಿಸುತ್ತಾರೆ ಹಿಂದಿನಿಂದ;
ಅವನಿಗದು
ತೀರಾ ತಿಳಿಬಯಸದ ವಿಷಯ
ಅಥವಾ
ನಿರಾಸಕ್ತಿ ಸಮಾಚಾರ.
ಕತ್ತಲು ಕಣ್ಣಿನವನು
ಲೋಕದ ಬೆಳಕಿಗೆ
ಕುರುಡು ನಡೆಯವನು;
ಜಗದ ನಾಲಿಗೆಗೆ
ರುಚಿಯಿಲ್ಲದ ಮೀನಿನಂತವನು.
ಇಂತಿಪ್ಪ ಇವನ
ಊರು ತುಂಬಾ ಪ್ರೀತಿಸುತ್ತಾರೆ;
ಕಾಣದ ಗಾಳಿ ಎಂಬಂತೆ
ನೋಡಬೇಕೆಂಬ
ಅರುಂಧತಿ ನಕ್ಷತ್ರದಂತೆ.
ಅವ ತುಂಬಾ ಕಾಡುತ್ತಾನೆ
ನಿಮ್ಮದೇ ಖಾಯಿಲೆಯಂತೆ;
ದವಾಯಿ ಹುಡುಕಬೇಡಿ
ಅಭ್ಯಾಸವಾಗುತ್ತಾನೆ
ನಿಮ್ಮದೇ ಆದತ್ತಿನಂತೆ.
ಅಂತವನೊಬ್ಬ ನಿಮ್ಮ
ಬಳಿ ಹಾದುಹೋಗುತ್ತಾನೆ;
ಆದರೆ ಆಗ ಯಾವ
ಕಾಗದ ಅಲುಗಾಡುವುದಿಲ್ಲ,
ಬದಲಿಗೆ,ಸಮಯ
ಆ ನಿಮಿಷಗಳನ್ನು ಕಡ
ತೆಗೆದುಕೊಳ್ಳುತ್ತದೆ
ನಿಮ್ಮಿಂದ ಮುಂದೆಂದಿಗೂ.!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments