
ಅಮಲು ಹನಿಗಳು
ಅಮಲು ಹನಿಗಳು.!
ಒಂದು ಪವಿತ್ರ
ದಿನಾಂತದಲ್ಲಿ ಸೇರೋಣ
ವೈನ್ ನದಿಯ ದಂಡೆಯಲ್ಲಿ
ಶರಾಬಿನ ಹೊದಿಕೆ ಹೊರಿಸಿ
ಅಮಲಿನ ತುಟಿಗಳಿಂದ
ಒಲವ ಹರಿಸುತ್ತಾ
ನಮ್ಮ ನುಣುಪಿಗೆ
ಲೋಕವೇ ಪ್ರಶ್ನೆಯಿಟ್ಟುಬಿಡಲಿ.!
ನಿನ್ನ ನೆನಪಾದಾಗಲೆಲ್ಲಾ
ಮತ್ತಾಗುತ್ತೇನೆ
ಮಧುಶಾಲೆಯಲ್ಲವೂ
ನಿಮಿತ್ತ ಮಾತ್ರ.!
ನಿನ್ನ ಬೆತ್ತಲೆ
ಬೆನ್ನು ಮುತ್ತಿದ್ದಷ್ಟು
ನನ್ನ ತುಟಿ ಹರೆಯ
ಪಡೆಯುತ್ತದೆ ಕನಸಿನಲ್ಲಿ.!
ಚಂದ್ರನೂ
ಮಧು ಕುಡಿದಿರಬೇಕು
ನಿನ್ನ ಗಲ್ಲಕಚ್ಚಿ
ಮೊಗಕಂಡಾಗಲೆಲ್ಲಾ
ಹೊಳೆಯುತ್ತಾನೆ ನಿನ್ನಂತೆ..!
ನಾ ತೀರಾ ಪೋಲಿಯಾಗೋದು
ನೀ ಕಣ್ಣುಗಳಿಂದಾನೇ
ಅಮಲೇರಿಸುವಾಗ..!
ನಾವೆಂದಿಗೂ
ಮುಟ್ಟಿಸಿಕೊಳ್ಳಲಿಲ್ಲ
ಬೆರಳುಗಳನ್ನು
ಆದರೂ ನೀ ಹೂವಾದೆನಾನು ಮಕರಂದ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments