
ನನ್ನ ಮರಣ ಶಾಸನವನ್ನು ನಾನೇ ಓದುತ್ತೇನೆಂದು
ನನ್ನ ಮರಣ ಶಾಸನವನ್ನು ನಾನೇ ಓದುತ್ತೇನೆಂದು
ಹೇಗೆ ಹೇಳಲಿ
ನನ್ನಾತ್ಮಕ್ಕೆ ಕಫನ್ ನಾನೇ ತೊಡಿಸುವುದೆಂದು
ಹೇಗೆ ಬರೆಯಲಿ
ಸಿಕ್ಕಿನ ಎಳೆ ಎಳೆದು ಉಸುರುವ ಹೃದಯಗಳ ಬಜಾರಿದು
ನನ್ನ ಚರಮಗೀತೆಯ ಪದ ನಾನೇ ಕಟ್ಟುತ್ತೇನೆಂದು
ಅದ್ಹೇಗೆ ಹಾಡಲಿ
ಕಾಸಗಲ ಬದುಕಿಗೆ ದಕ್ಕೋದು ನಾಲ್ಕು ಭುಜ
ಮೊಳ ಬಟ್ಟೆ ಕೊನೆಗೆ
ಉರಿದು ಉರಿದು ಕಪ್ಪಿಟ್ಟ ಚಿತ್ರ
ಉಳಿಸಿ ಹೇಗೆ ಹೋಗಲಿ
ಕಿಟಕಿ ಸಂಧಿಯನ್ನು ಮುಚ್ಚಿ ಬೆಳಕ ಕಾದ
ದರವೇಸಿ ನಾನು
ಕದಡಿದ ನೀರಲ್ಲಿ ನನ್ನ ಬಿಂಬ ಇಲ್ಲವೆಂದು
ಹೇಗೆ ದೂರಲಿ
ಹುಣ್ಣು ಹೆಜ್ಜೆ ಹಾದಿಯ ತಕರಾರಲ್ಲಿ
ಪಾದದ ಪಾಪ
ಕತ್ತಲು ಕಣ್ಣಿನ 'ಅವಿ'ಯ ಕವಿಯಿಂದ
ಜಗವ ಹೇಗೆ ನೋಡಲಿ
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments