ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಒಂದು ಸುಂದರ ಸಂಜೆ

ಒಂದು ಸುಂದರ ಸಂಜೆ

ಒಂದು ಸುಂದರ ಸಂಜೆ ನಾ ಸಾಯಬೇಕು ಆ ಪ್ರಶಾಂತತೆಯ ಬೆನ್ನಲ್ಲಿ ಗೀರಿಟ್ಟುಕೊಂಡ ಬದುಕ ಅಂಗಾತ ಮಲಗಿಸಿಬಿಡಿ ನೋವ ಸಂಕ್ಷಿಪ್ತತೆಯ ಕನ್ನಡಿ ನನ್ನನ್ನಷ್ಟೇ ನೋಡುತಲಿರಲಿ ಬದುಕ ದಕ್ಕಿಸಬೇಕೆಂಬ ನನ್ನ ಹುಕಿಗೆ ಮುಳ್ಳು ಪರಚಿದ ಭಾಗವೆಲ್ಲ ಯಾವ ಕಣ್ಣೀರಿನಿಂದಾನೂ ತೊಳೆಯದಿರಿ ಮಸಣದ ದಾರಿಯುದ್ದಕ್ಕೂ ಹಾಯ್ದುಹೋಗಲಿ ಶರತ್ಕಾಲದ ಹೂವ ಎಸಳಂತೆ ಒಂದೊಂದು ಕನಸು ಒಡೆದ ಕಣ್ಣುಗಳ ಚೂರು ಯಾವ ಕಾಲಿಗೂ ತಾಕದಂತೆ ನೋಡಿಕೊಳ್ಳಿ ಪಾದಕ್ಕಂಟುವ ಶಾಪದ ಉಮೇದಿನ ಧಾವಂತ ಬದುಕ ಪುಟಗಳಿಗಲ್ಲ ಗೆದ್ದಲು ಹಿಡಿಸಿಬಿಡುವ ತುರ್ತಿನದ್ದು ಗಳಿಸಿದ ಉತ್ತರಗಳ ಪ್ರಶ್ನೆಯನ್ನಷ್ಟೇ ಬಿಸುಟಿ ಹೋಗುತ್ತೇನೆ ದಕ್ಕದ ಜವಾಬು ನನ್ನಷ್ಟೇ ದಿವಂಗತ ಮತ್ತೂ, ಆ ಸುಂದರ ಸಂಜೆ ನಾ ಸಾಯಬೇಕು ಯಾವ ಕಡವೂ ಬೆನ್ನೇರದ ಹಾಗೆ ಬದುಕ ಹೊಲಪ ಮೈಯೆಲ್ಲ ಮೆತ್ತಿಕೊಂಡಂತೆ ನಿರ್ಲಿಪ್ತನಾಗಿ..!
-ಅವಿಜ್ಞಾನಿ
ಇನ್ನೂ ಓದಿ: ನನ್ನ ಮರಣ ಶಾಸನವನ್ನು ನಾನೇ ಓದುತ್ತೇನೆಂದು · ನನ್ನ ಸಾವಿಗೆ · ನನ್ನ ಉಸಿರೂ ನಿಲ್ಲಲಿದೆ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI