ಸಾವಿನ ಕವನಗಳು Poems on Death
ಸಾವಿನ ಬಗ್ಗೆ ಬರೆದ ಕವನಗಳು. ಸಾವು, ಮರಣ, ಅಂತ್ಯ — ಕವಿಯ ಕಣ್ಣಲ್ಲಿ.

ನನ್ನ ಮರಣ ಶಾಸನವನ್ನು ನಾನೇ ಓದುತ್ತೇನೆಂದು
ನನ್ನ ಮರಣ ಶಾಸನವನ್ನು ನಾನೇ ಓದುತ್ತೇನೆಂದು
ಹೇಗೆ ಹೇಳಲಿ
ನನ್ನಾತ್ಮಕ್ಕೆ ಕಫನ್ ನಾನೇ ತೊಡಿಸುವುದೆಂದು
ಹೇಗೆ ಬರೆಯಲಿ
-ಅವಿಜ್ಞಾನಿ

ನನ್ನ ಸಾವಿಗೆ
ನನ್ನ ಸಾವಿಗೆ
ನಾ ಮಾದಕತೆ ತುಂಬಿಟ್ಟಿದ್ದೇನೆ
ಬಹುವಾಗಿ
ಚೆಲುವನ ಕಾಯುವ
ಕನ್ಯೆಯ ಕತ್ತಲ ದೂಡುವ
ಕ್ಷಣಗಳಂತದ್ದು
…
-ಅವಿಜ್ಞಾನಿ

ನನ್ನ ಉಸಿರೂ ನಿಲ್ಲಲಿದೆ
ನನ್ನ ಉಸಿರೂ ನಿಲ್ಲಲಿದೆ
ಯಾವ ಆಸ್ಫೋಟನೆಯ
ಭೀಕರತೆಯಲ್ಲ ಅದು
ತಿಳಿದಿದ್ದೇನೆ
-ಅವಿಜ್ಞಾನಿ

ಒಂದು ಸುಂದರ ಸಂಜೆ
ಒಂದು ಸುಂದರ ಸಂಜೆ
ನಾ ಸಾಯಬೇಕು
ಆ ಪ್ರಶಾಂತತೆಯ ಬೆನ್ನಲ್ಲಿ
ಗೀರಿಟ್ಟುಕೊಂಡ
ಬದುಕ ಅಂಗಾತ
ಮಲಗಿಸಿಬಿಡಿ
…
-ಅವಿಜ್ಞಾನಿ


ಹನಿ 2
ದಿನಾ ಸಾಯುವುದನ್ನು
ಕಲಿತಿದ್ದೇನೆ ಬದುಕೇ
ಬದುಕುವುದನ್ನೊಮ್ಮೆ
ಕಲಿಸಿಕೊಡು.!
-ಅವಿಜ್ಞಾನಿ

ಹನಿ 20
ಧ್ಯಾನಸ್ಥ ಹೂವಿನ ಮೌನ
ಮರಣ ಮೃದುಂಗವಾಗಿದೆ ಈಗ
ಪಕಳೆಯ ಮಿಡಿತ ಮಸಣದ
ಕೂಗು.!
-ಅವಿಜ್ಞಾನಿ

ಹನಿ 30
ನನ್ನ ಸಾವಾದರೂ
ಸುದ್ಧಿಯಾಗಬೇಕು
ಅಂದಾದರೂ
ಅರಿಯಬಹುದು
ನಾ ಬದುಕಿದ್ದರ ಕುರಿತು
ಈ ಕುರುಡು ಜಗತ್ತು.!
-ಅವಿಜ್ಞಾನಿ


ಹನಿ 32
ಸಾವು ಕೂಡ
ಉಡಾಫೆ ಮಾಡುವ
ಧರವೇಸಿಯ ಧೈನ್ಯತೆಗೆ
ಲೋಕ ಮರುಗುತ್ತದೆ
ಬಹಳವೇ.!
-ಅವಿಜ್ಞಾನಿ

