ಪ್ರೇಮ ಕವನಗಳು Love Poems
ಪ್ರೇಮದ ಬಣ್ಣ ಹಚ್ಚಿದ ಕವನಗಳು. ದಕ್ಕದ ಪ್ರೀತಿ, ನೆನಪು, ಕನಸು — ಪ್ರೀತಿಯ ಒಂದೊಂದು ಮುಖ.

ಅವನ ಪ್ರೀತಿ
ಅವನನ್ನು ತುಂಬಾ
ಪ್ರೀತಿಸುತ್ತಾರೆ ಹಿಂದಿನಿಂದ;
ಅವನಿಗದು
ತೀರಾ ತಿಳಿಬಯಸದ ವಿಷಯ
ಅಥವಾ
ನಿರಾಸಕ್ತಿ ಸಮಾಚಾರ.
-ಅವಿಜ್ಞಾನಿ

ಅಮಲು ಹನಿಗಳು
ನಿನ್ನ ನೆನಪಾದಾಗಲೆಲ್ಲಾ
ಮತ್ತಾಗುತ್ತೇನೆ
ಮಧುಶಾಲೆಯಲ್ಲವೂ
ನಿಮಿತ್ತ ಮಾತ್ರ.!
-ಅವಿಜ್ಞಾನಿ

ನಿನ್ನ ಬೆತ್ತಲೆ ಪಾದಗಳಿಗೊಮ್ಮೆ
ಜುಮುಕಿ ಹೊತ್ತ ಕಿವಿಗಳನ್ನೇ ದಿಟ್ಟಿಸಿ ನೋಡುತ್ತೇನೆ
ಅವೆಷ್ಟು ಲೀಲಾಜಾಲವಾಗಿ
ನಿನ್ನಲ್ಲೇ ಲೀನವಾಗಿದೆ
ನೀ ತಿರುಗುವ ದಿಕ್ಕಿಗಲ್ಲ ದಿಕ್ಕೂಚಿಯಂತೆ ತಿರುಗುತ್ತದೆ
ತೋರು ಬೆರಳಿನಿಂದ ಒಮ್ಮೆ
ಮುಟ್ಟಿ ನಿನಾದ ಹೊರಡಿಸುತ್ತೇನೆ
-ಅವಿಜ್ಞಾನಿ

ನೀನೊಂದು ದಕ್ಕಲಾರದ
ನೀನೊಂದು ದಕ್ಕಲಾರದ
ಕವಿತೆ
ಆದರೂ ಬರೆಯುವ ಪಣ
ತೊಡುತ್ತೇನೆ
ಪದಗಳೆಲ್ಲ ಗೋಜಲಾಗಿದೆಯಾ?
'ಕೇಳು,
…
-ಅವಿಜ್ಞಾನಿ


