ಊರು ತುಂಬಾ ಪ್ರೀತಿಸುತ್ತಾರೆ;
ಕಾಣದ ಗಾಳಿ ಎಂಬಂತೆ
ನೋಡಬೇಕೆಂಬ
ಅರುಂಧತಿ ನಕ್ಷತ್ರದಂತೆ.
ಕನ್ನಡ ಕೋಟ್ಸ್ Kannada Quotes
ಅವಿಜ್ಞಾನಿ ಅವರ ಕವನಗಳಿಂದ ಆಯ್ದ ಸಾಲುಗಳು — ಪ್ರೇಮ, ಬದುಕು, ನೋವು.
ಪ್ರೇಮ Love
ಸಾವು ಕೂಡ
ನಿಮ್ಮ ಬಳಿ
ಬರುವುದೂ ಪ್ರೇಮದಿಂದಾನೇ..!
ನಿನ್ನ ನಗು ಕಲ್ಪನೆ
ನಾಚಿಕೆ ಬಿಂಕ
ಪಾಸ್ವರ್ಡ್ ಅಥವಾ
ನಿನ್ನಿಷ್ಟದ ಟೀ ಶರ್ಟ್
ಬದುಕು Life
ಡೊಂಕಾಗಿ ನಡೆದಾಗ
ಮುಸಿ ನಗುವ ಸಂತೆಯವರು
ಕಾಲ ಊತದ ಕುರಿತು
ತರ್ಕಿಸಿದ್ದಿಲ್ಲ.!
ನನ್ನ ದಿನಮಾನದ
ಗಡಿಯಾರ ಬಿಕ್ಕುವುದನ್ನಷ್ಟೇ
ಕಲಿತುಕೊಂಡಿದೆ
ಮತ್ತು ನಾನೂ..!
ಊತ ಕಾಲಿನದ್ದೇ
ಆಗಿತ್ತು
ಗೀರೆಳೆದದ್ದು ಬದುಕಲ್ಲಿ.!
ನಿನ್ನ ಹಿಸಾಬಿನ
ಅಳತೆಗೋಲು
ಸರಿಯಿರಲಿ ಖುದಾ
ಬೆವರ ಲೆಕ್ಕ ಹೇಳಲಿಕ್ಕಿದೆ
ನನಗೆ..!
ಸೋಲಿನ ಕುರಿತು ಪರಾಧಿ
ಇಲ್ಲ ನನಗೆ
ನಸೀಬಿನ ಗೆರೆಯೇ
ಅಳಿದ ಹುಡುಗ ನಾನು..!
ಬೆರಳು ಚಾಚದಿರಿ
ನನ್ನತ್ತ ಕವಿಯೆಂದು
ಬೆಸೆಯಲಾರೆ ಗೆರೆಯನ್ನು
ಬದುಕಿರದರಲ್ಲಿ.!
ನೋವು Pain
ಅಂಗೈಯಗಲ
ನಸೀಬಿನವನಲ್ಲಿ
ಬೊಗಸೆಯಷ್ಟಿನ
ದರ್ದು..!
ನನ್ನ ಪರಿತಾಪಗಳು
ನಿನ್ನ ಸಂತಾಪದ
ಹುಕಿಗಾಗಿ ಅಲ್ಲ,
ಬದುಕು ದಕ್ಕದ ಸಲುವಾಗಿ..!!
ನನ್ನ ಕಡದ ಕೈ
ಕೊಳೆಯಾಗಿ ಕಾಣಬಹುದು
ಒರೆಸಿಕೋ ಕಣ್ಣ
ಮಸಿ ಮೈಯಲಲ್ಲ
ಮನಸ್ಸಿನಲ್ಲಾಗಿದೆ ನಿನ್ನ.!
ನವಿಲು ನೀನು
ಗರಿಬಿಚ್ಚು ಯಥೇಚ್ಛವಾಗಿ
ರೆಕ್ಕೆ ಮುರಿದ
ನನ್ನ ಹಾಡು ಕೇಳುವಂತದ್ದಲ್ಲ.!
ಕಡಲಾಗಬೇಕಿತ್ತು
ಕುದಿವ ಬೇಗುದಿಯ
ಒಡಲೊಳಗಿಟ್ಟುಕೊಳ್ಳಲು.!
ಇನ್ನೊಂದು
ದುರ್ಗಮ ದಿನ
ದುಗುಡ ಕವಿತೆ
ಹಾಗೂ
ಸ್ವರ್ಗದ ತೋಪಿನಲ್ಲಿ
ಬರೆಯದ ನನ್ನೀ
ದಿನಚರಿ..!
